ಪಂಜ: ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಎರಡನೇ ದಿನ ಅ.12 ರಂದು ಶ್ರೀ ಪಂಚಲಿಂಗೇಶ್ವರ
ಮಕ್ಕಳ ಭಜನಾ ತಂಡ ನಾಗತೀರ್ಥ,ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ವಿಷ್ಣು ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ, ಮಾಸ್ಟರ್ ಪ್ರಕುಲ್ ತೋಟ ಇವರಿಂದ ತಬಲ ಮತ್ತು ಕೀಬೋರ್ಡ್ ವಾದನ ನಡೆಯಿತು. ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ

ಸದಸ್ಯರು,ಭಕ್ತಾದಿಗಳು ಪಾಲ್ಗೊಂಡಿದ್ದರು.ಅ.13 ರಂದು ಪಂಬೆತ್ತಾಡಿ
ಪಂಚಶ್ರೀ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ,ಅದಿತಿ ಲಕ್ಷ್ಮಿ ನಾಯರ್ಕೆರೆ ಮತ್ತು ವರ್ಷ ನೆಲ್ಲಿಗದ್ದೆ ಭೈರವಿ ನಾಟ್ಯಾಲಯ ಐವರ್ನಾಡು ಇವರಿಂದ ಭರತನಾಟ್ಯ ನಡೆಯಲಿದೆ.








