ಸುಳ್ಯ:ಆರಂತೋಡು ಗ್ರಾಮ ಪಂಚಾಯತ್ನ ಎನ್.ಆರ್. ಎಲ್. ಎಂ. ನೂತನ ಕಟ್ಟಡಕ್ಕೆ ಶಾಸಕಿ ಭಾಗಿರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅರಂತೋಡು ಗ್ರಾಮ ಪಂಚಾಯತ್ನ ಸಭಾಂಗಣದ ಪಾಕ ಶಾಲೆ ನಿರ್ಮಾಣಕ್ಕೆ ರೂ. 5ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು. ಅರಮನೆಗಯದಲ್ಲಿ ಬಲ್ನಾಡ್ ಹೊಳೆಗೆ ಸಂಪರ್ಕ ಸೇತುವೆ ನಿರ್ಮಾಣಕ್ಕೆ 1.75ಕೋಟಿ ಅನುದಾನ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿ ಹೊಂದಿದ ರೆಂಜಾಳ- ಬಿಳಿಯಾರು ರಸ್ತೆಯ
ರೆಂಜಾಳ ದಿಂದ ಪಿಂಗಾರತೋಟದವರೆಗೆ ಮರು ಡಾಮರೀಕರಣಕ್ಕೆ ಅನುದಾನ ಮತ್ತು ದೇರಾಜೆ -ಕೆರೆಮೂಲೆ ರಸ್ತೆ ಕಾಂಗ್ರೆಟೀಕರಣಕ್ಕೆ ರೂ. 5ಲಕ್ಷ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಆರಂತೋಡು ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ ಮಾತನಾಡಿದರು.

ಪಂಚಾಯತ್ ಉಪಾಧ್ಯಕ್ಷೆ ಭವಾನಿ ಚಿಟ್ಟನ್ನೂರು, ಆರಂತೋಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಉಳುವಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ. ಆರ್. ಭಯೋತ್ಪಾದನಾ ವಿರೋಧಿ ದಿನಾಚರಣೆಯ ಪ್ರಮಾಣವಚನ ಬೋಧಿಸಿ ವಂದಿಸಿದರು.
ಕಾರ್ಯಕ್ರಮ ದಲ್ಲಿ. ಎನ್. ಆರ್. ಎಲ್. ಎಂ. ತಾಲೂಕು ಅಧಿಕಾರಿಗಳು,ಆರಂತೋಡು ಪಂಚಾಯತ್ ಆಡಳಿತ ಸಮಿತಿ ಸದಸ್ಯರು, ಸಹಕಾರಿ ಸಂಘ ದ ನಿರ್ದೇಶಕರುಗಳು, ಗ್ರಾಮದ ಸಂಘ, ಸಂಸ್ಥೆ ಯ ಪದಾಧಿಕಾರಿಗಳು ಹಾಗೂ ಊರಿನ ನಾಗರೀಕರುಹೆಚ್ಚಿನ ಸಂಖ್ಯೆ ಭಾಗವಹಿಸಿದ್ದರು.