ಸುಳ್ಯ:ಅಮೃತ್ ಕುಕ್ಕೇಟಿ ನೇತೃತ್ವದ ‘ನಿಯೋಫ್ಲೈ ಪೋಟೋಗ್ರಫಿ’ ಎಂಬ ನೂತನ ಸ್ಟುಡಿಯೋ ಮಂಡೆಕೋಲು ಗ್ರಾಮದ ಪೇರಾಲಿನ ತೇಜಸ್ವಿ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.
ಬಜಪಿಲ ಶ್ರೀ ಉಳ್ಳಾಕುಲು ಕ್ಷೇತ್ರದ ಆಡಳಿತ ಮೊಕ್ತೇಸರ ಹೇಮಂತಕುಮಾರ್ ಗೌಡರಮನೆ ದೀಪ ಬೆಳಗಿಸಿ ನೂತನ ಸ್ಟುಡಿಯೋ ಉದ್ಘಾಟಿಸಿದರು.ಈ ಸಂದರ್ಭದಲ್ಲಿ
ಹಿರಿಯರಾದ ಕುಕ್ಕೇಟಿ ಲಕ್ಷ್ಮಣ ಗೌಡ, ನಾರಾಯಣ ಗೌಡ ಕುಕ್ಕೇಟಿ, ಶ್ರೀಮತಿ ಶೇಷಮ್ಮ, ಪ್ರಮುಖರಾದ ಜಯರಾಜ್ ಕುಕ್ಕೇಟಿ, ಚಂದ್ರಕುಮಾರ್ ಕುತ್ಯಾಳ, ಮೋನಪ್ಪ ಅಡ್ಕಬಳೆ, ಶ್ರೀಹರಿ ಕುಕ್ಕುಡೇಲು, ಚಂದ್ರಶೇಖರ ಕುಕ್ಕೇಟಿ, ಕಟ್ಟಡದ ಮಾಲಕರಾದ ಭಾಸ್ಕರ ಗೌಡ ಎಂ.ಪಿ, ಸ್ಟುಡಿಯೋದ ಮಾಲಕರಾದ ಜಯಪ್ರಕಾಶ್ ಕುಕ್ಕೇಟಿ, ಅಮೃತ್ ಕುಕ್ಕೇಟಿ, ಕುಸುಮಾವತಿ ಕುಕ್ಕೇಟಿ, ಅನ್ವಿತಾ ಮತ್ತಿತರರು ಉಪಸ್ಥಿತರಿದ್ದರು. ಜಯಪ್ರಕಾಶ್ ಕುಕ್ಕೇಟಿ ಸ್ವಾಗತಿಸಿ, ಅಮೃತ್ ಕುಕ್ಕೇಟಿ ವಂದಿಸಿದರು.

ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಆರಂಭವಾಗಿರುವ ಸ್ಟುಡಿಯೋದಲ್ಲಿ ಅತ್ಯಂತ ಶೀಘ್ರವಾಗಿ ಪೊಟೊ ಹಾಗೂ ಇತರ ಸೇವೆ ನೀಡಲಾಗುತ್ತದೆ.
ಹತ್ತು ನಿಮಿಷದಲ್ಲಿ ಪಾಸ್ಪೋರ್ಟ್ ಸೈಜ್ ಫೋಟೋ ಲಭ್ಯವಿದೆ.
ಮದುವೆ, ಸಭೆ, ಸಮಾರಂಭಗಳ ಆಕರ್ಷಕ ಫೋಟೋ ಮತ್ತು ವಿಡಿಯೋ ಮಾಡಿ ಕೊಡಲಾಗುತ್ತದೆ.ಮಿತ ದರದಲ್ಲಿ ಆಮಂತ್ರಣ ಪತ್ರ ಮುದ್ರಣ ಮಾಡಿಕೊಡಲಾಗುವುದು.ಜೆರಾಕ್ಸ್ ಸೌಲಭ್ಯ ಇದೆ.
ಪೋಸ್ಟರ್, ಬ್ಯಾನರ್, ಡಿಸೈನಿಂಗ್ ಫೋಟೋ ಪ್ರೇಮ್ ಮಾಡಿಕೊಡಲಾಗುವುದು.ಪ್ರಮಾಣಪತ್ರ ಮತ್ತು ಟ್ರೋಫಿ ಹಾಗೂ ಇತ್ಯಾದಿ ಸೇವೆ ಲಭ್ಯವಿದೆ.ಹೆಚ್ಚಿನ ಮಾಹಿತಿಗಾಗಿ
ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು
8310001962, 9902269771
ಎಂದು ಸಂಸ್ಥೆಯ ಮಾಲಕರಾದ ಅಮೃತ್ ಕುಕ್ಕೇಟಿ ಹಾಗೂ ಜಯಪ್ರಕಾಶ್ ಕುಕ್ಕೇಟಿ ತಿಳಿಸಿದ್ದಾರೆ.