ನವದೆಹಲಿ: ದೇಶದ ಖಾಸಗಿ ವಲಯದ ಅತಿದೊಡ್ಡ ತೈಲೋತ್ಪನ್ನ ಮಾರಾಟ ಕಂಪನಿ ನಯಾರಾ ಎನರ್ಜಿ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 5ರಷ್ಟು, ಡೀಸೆಲ್ ಬೆಲೆಯನ್ನು 3ರಷ್ಟು ಕಡಿತಗೊಳಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆಯಾಗಿ ಅಂತರರಾಷ್ಟ್ರೀಯ ತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ
ಕಂಪನಿ ದರ ಇಳಿಕೆ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಕಳೆದ ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಯಾವುದೇ ಕಂಪನಿಯು ಇಂಧನ ದರ ಕಡಿಮೆ ಮಾಡಿರುವುದು ಇದೇ ಮೊದಲು.ಸಾರ್ವಜನಿಕ ವಲಯದ ಇಂಧನ ಮಾರಾಟ ಕಂಪನಿಗಳು ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ತೈಲ ಬೆಲೆ ತೀವ್ರವಾಗಿ ಏರಿಕೆಯಾದಾಗ ಹೆಚ್ಚಿಸಿದ ಇಂಧನ ಬೆಲೆಗಳನ್ನು ನಯಾರಾ ಕಡಿತ ಮಾಡಿದೆ.






