ಸುಳ್ಯ:ರೋಟರಿ ಕ್ಲಬ್ ಸುಳ್ಯ ವತಿಯಿಂದ ನೀಡುವ ನೇಷನ್ ಬಿಲ್ಡರ್ ಅವಾರ್ಡ್ಗೆ 6 ಮಂದಿ ಶಿಕ್ಷಕರು ಆಯ್ಕೆಯಾಗಿದ್ದು ಸೆ.6 ರಂದು ರೋಟರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಕರ ದಿನಾಚರಣೆಯ ಅಂಗವಾಗಿ ರೋಟರಿ ನೇಷನ್ ಬಿಲ್ಡರ್ ಅವಾರ್ಡ್ ನೀಡಲಾಗುತ್ತದೆ. ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತಾಯ, ಸಂಪಾಜೆ ಸರಕಾರಿ
ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಾವತಿ ಡಿ, ಶಾಂತಿನಗರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ತುಳಸಿ ಕೆ, ರೋಟರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ
ಸರೋಜಾ ಎಂ ಟಿ, ರೋಟರಿ ಪೂರ್ವ ಪ್ರಾಥಮಿಕ ಶಾಲೆ ಸವಿತಾ ರಾಜೇಶ್, ರೋಟರಿ ಪ್ರೌಢಶಾಲೆ ಸಹ ಶಿಕ್ಷಕಿ ಉಷಾ ಕೆ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಳ್ಯ ರೋಟರಿ ಅಧ್ಯಕ್ಷ ಆನಂದ ಖಂಡಿಗ, ಕಾರ್ಯದರ್ಶಿ ಕಸ್ತೂರಿ ಶಂಕರ್, ಕೋಶಾಧಿಕಾರಿ ಆಶಿತಾ ಕೇಶವ್, ಮಾಜಿ ಅಧ್ಯಕ್ಷ ಚಂದ್ರಶೇಖರ ಪೇರಾಲು
ರೋಟರಿ ಕ್ಲಬ್ ಪದಾಧಿಕಾರಿಗಳಾದ ಎಂ.ಮೀನಾಕ್ಷಿ ಗೌಡ, ರಾಮಚಂದ್ರ ಪಿ, ಮದುಸೂಧನ್ ಕುಂಭಕ್ಕೋಡು, ಭಾಸ್ಕರನ್ ನಾಯರ್, ಬೆಳ್ಯಪ್ಪ ಗೌಡ, ಲಿಂಗಪ್ಪ ಗೌಡ, ಪ್ರಭಾಕರನ್ ನಾಯರ್, ಸಿ.ಎಚ್.ಪ್ರಭಾಕರನ್ ನಾಯರ್ ಚಂದ್ರಮತಿ, ಯೊಗಿತಾ ಗೋಪಿ, ಪ್ರಭಾಕರನ್ ನಾಯರ್, ಗಣೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ ಸ್ವಾಗತಿಸಿದರು. ಚಂದ್ರಶೇಖರ ಪೇರಾಲು ಆಶಯ ಭಾಷಣ ಮಾಡಿದರು.ಚಂದ್ರಮತಿ ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಕಸ್ತೂರಿ ಶಂಕರ್ ವಂದಿಸಿದರು.