ಸುಳ್ಯ:ಬಾನಂಗಳದಲ್ಲಿ ಇಂದು ಸಂಜೆ ಖಗೋಳ ವಿಸ್ಮಯವೊಂದು ಗೋಚರಿಸಿದೆ. ಸುಂದರವಾಗಿ ಕಾಣುವ ಚಂದಿರನ ಸನಿಹಕ್ಕೆ ಶುಕ್ರ ಗ್ರಹ ಬಂದು ಅಪರೂಪದ ದೃಶ್ಯ ಕಾವ್ಯ ಸೃಷ್ಠಿಸಿದೆ. ಆಕಾಶದಲ್ಲಿ ಚಂದ್ರ ಮತ್ತು ಶುಕ್ರ ಜತೆಜತೆಯಲ್ಲೇ ಮಿನುಗುತ್ತಿದ್ದ ದೃಶ್ಯ ಕಂಡು ಬಂದಿದೆ. ವಿವಿಧ

ಕಡೆಗಳಲ್ಲಿ ಆಕಾಶದಲ್ಲಿ ಈ ಆಕರ್ಷಕ ಖಗೋಳ ವಿಸ್ಮಯ ಗೋಚರಿಸಿದೆ.ಚಂದ್ರ ಮತ್ತು ಶುಕ್ರ ಪರಸ್ಪರ ಅತ್ಯಂತ ಸಮೀಪವಾಗಿ ಕಾಣಿಸಿಕೊಂಡ ಈ ವಿದ್ಯಮಾನವನ್ನು ಚಂದ್ರ–ಶುಕ್ರ ಸಂಯೋಗ ಎಂದು ಹೇಳಲಾಗಿದೆ. ಸುಳ್ಯ ಭಾಗದಲ್ಲೂ ಹಲವು ಮಂದಿ ಈ ಆಕಾಶ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದಾರೆ.ಮೋಡ ಕವಿದ ವಾತಾವರಣ ಇದ್ದ ಕಾರಣ ಹಲವರಿಗೆ ಆಕಾಶ ವಿಸ್ಮಯ ನೋಡಲಾಗಲಿಲ್ಲ.











