ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಸಮಸ್ಯೆಗಳ ಕುರಿತು ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದಿದ್ದರು. ಅವರ ಪ್ರಶ್ನೆಗಳಿಗೆ ಸರಕಾರ ಉತ್ತರ ನೀಡಿದೆ.
ಸರಕಾರದಿಂದ ಹೈನುಗಾರಿಕೆ ಪ್ರತಿ ಲೀಟರ್ ಹಾಲಿಗೆ ನೀಡಲಾಗುವ ಪ್ರೋತ್ಸಾಹಧನ ಎಷ್ಟು? ಎಂದು ಪ್ರಶ್ನೆ ಮಾಡಿದರು. ಉತ್ತರ ನೀಡಿರುವ ಪಶು ಸಂಗೋಪನಾ ಸಚಿವರು ಪ್ರತೀ ಲೀಟರ್ ಗುಣಮಟ್ಟದ ಹಾಲಿಗೆ ರೂ. 5ರಂತೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹೈನುಗಾರರಿಗೆ ಪಾವತಿಸಬೇಕಾ ಪ್ರೋತ್ಸಾಹಧನ ಮೊತ್ತ ಸುಳ್ಯ ಮತ್ತು ಕಡಬ ತಾಲೂಕಿಗೆ
ಪಾವತಿಸಬೇಕಾದ ಬಾಕಿಯ ಕುರಿತು ಶಾಸಕರು ವಿವರ ಕೇಳಿದ್ದು, ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯ ಸುಳ್ಯ ಮತ್ತು ಕಡಬ ತಾಲೂಕಿನ ಹಾಲು ಉತ್ಪಾದಕರಿಗೆ ರೂ. ೪.೩೩ ಕೋಟಿ ಪ್ರೋತ್ಸಾಹಧನ ವಿತರಣೆಗೆ ಬಾಕಿ ಇದೆ ಎಂದು ಮತ್ತು ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.
ಕಡಬ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯತರರ ಕಚೇರಿಯನ್ನು ಪ್ರಾರಂಭಿಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಚೇರಿ ಆರಂಭ ಮತ್ತು ಸಿಬ್ಬಂದಿ ನೇಮಕಾತಿ ಬಗ್ಗೆ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ ಲೋಕೋಪಯೋಗಿ ಸಚಿವರು ಉತ್ತರ ನೀಡಿ ಇದು ನಮ್ಮ ಗಮನದಲ್ಲಿದೆ. ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ವಿಭಾಗಕ್ಕೆ ಮಂಜೂರಾದ, ಭಡ್ತಿಗೊಂಡ ಮತ್ತು ಖಾಲಿ ಇರುವ ಚಾಲಕ, ನಿರ್ವಾಹಕ ಮತ್ತು ಇತರ ಸಿಬ್ಬಂದಿಗಳ ಸಂಖ್ಯೆ ಎಷ್ಟು? ಸಿಬ್ಬಂದಿ ಕೊರತೆಯಿಂದ ಸುಳ್ಯ ಮತ್ತು ಕಡಬ ತಾಲೂಕುಗಳ ಗ್ರಾಮೀಣ ಪ್ರದೇಶಗಳಿಗೆ ಅಗತ್ಯ ಸಂಚಾರ ಸೌಲಭ್ಯ ಸಿಗದೆ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಕುರಿತು ಸರಕಾರದ ಗಮನಕ್ಕೆ ಬಂದಿದೆಯೇ? ಏನು ಕ್ರಮ ಕೈಗೊಂಇಡದೆ ಎಂದು ಪ್ರಶ್ನಿಸಿದೆ. ಇದಕ್ಕುತ್ತರಿಸಿದ ಸಾರಿಗೆ ಸಚಿವರು, ನಿಗಮದ ವತಿಯಿಂದ ಸುಳ್ಯ ತಾಲೂಕಿನ ೩೪ ಗ್ರಾಮಗಳಿಗೆ ೩೭ ಅನುಸೂಚಿಗಳಿಂದ ೨೭೨ ಏಕಸುತ್ತುವಳಿಗಳಲ್ಲಿ ಹಾಗೂ ಕಡಬ ತಾಲೂಕಿನ ಎಲ್ಲಾ ೪೨ ಗ್ರಾಮಗಳಿಗೆ ೨೩ ಅನುಸೂಚಿಗಳಿಂದ ೯೩ ಏಕಸುತ್ತುವಳಿಗಳಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚಿನ ಸಾರಿಗೆ ಸೌಲಭ್ಯಕ್ಕೆ ಬೇಡಿಕೆ ಬಂದಿದ್ದು, ಆದರೆ ಸಿಬ್ಬಂದಿ ಕೊರತೆಯಿಂದ ಸೌಲಭ್ಯ ಒದಗಿಸಲಾಗಿಲ್ಲ. ೨೦೨೩-೨೪ನೇ ಸಾಲಿನ ಹಿಂದಿನ ೭ ವರ್ಷಗಳಲ್ಲಿ ಸಿಬ್ಬಂದಿ ನೇಮಕಾತಿ ಆಗಿಲ್ಲ. ನಿಗಮದಲ್ಲಿ ಚಾಲನಾ ಸಿಬ್ಬಂದಿಯ ನೇರನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ನಿಗಮಕ್ಕೆ ಸಿಬ್ಬಂದಿಗಳ ಸೇರ್ಪಡೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಕಲ್ಪಿಸಲು ಪರಿಶೀಲಿಸಿ ಹಂತಹಂತವಾಗಿ ಕ್ರಮ ವಹಿಸಲಾಗುವುದು.
ಸುಳ್ಯ ಮತ್ತು ಕಡಬ ತಾಲ್ಲೂಕುಗಳಲ್ಲಿ ಪ್ರಸ್ತುತ ಎಷ್ಟು ಮೋಜಣಿದಾರರು ನಿರ್ವಹಿಸುತ್ತಿದ್ದಾರೆ ಎಂದು ಶಾಸಕಿ ಭಾಗೀರಥಿ ಮುರುಳ್ಯರು ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ಕಂದಾಯ ಸಚಿವರು
ಸುಳ್ಯ ತಾಲೂಕಿನಲ್ಲಿ ೧೦ ಜನ ಮತ್ತು ಕಡಬ ತಾಲ್ಲೂಕಿನಲ್ಲಿ ೮ ಜನ ಪರವಾನಗಿ ಭೂಮಾಪಕರು -ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಉತ್ತರಿಸಿದರು. ಪರವಾನಗಿ ಮೋಜಣಿದಾರರಿಗೆ ಸರ್ಕಾರಿ ಮತ್ತು ಅಕ್ರಮ ಫಲಾನುಭವಿಗಳಿಗೆ ಸಕ್ರಮದಡಿ ಮಂಜೂರಾದ ಜಮೀನನ್ನು ಅಳತೆ ಅಥವಾ ಪೋಡಿ ಮಾಡಲು ಅವಕಾಶ ಕಲ್ಪಿಸಲಾಗಿದೆಯೇ? ಎಂದು ಶಾಸಕರು ಪ್ರಶ್ನಿಸಿದಾಗ ಇಲ್ಲ ಎಂದು ಸಚಿವರು ಉತ್ತರಿಸಿದ್ದಾರೆ. ಮತ್ತಷ್ಟು ವಿವರಕ್ಕಾಗಿ ಪ್ರಶ್ನೆ ಮಾಡಿದ ಶಾಸಕರು ಇಲ್ಲದಿದ್ದಲ್ಲಿ ಪರವಾನಗಿ ಮೋಜಣಿದಾರರಿಗೆ ದರಖಾಸ್ತು ಪೋಡಿ ಅಳತೆಗೆ ಸರ್ಕಾರದಿಂದ ಯಾವಾಗ ಅವಕಾಶ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಪ್ರಶ್ನಿಸಿದಾಗ ಪ್ರಸ್ತುತ ಭೂಮಾಪನ ಇಲಾಖೆಯಲ್ಲಿ ಸರ್ಕಾರಿ ಜಮೀನು ಮತ್ತು ಅಕ್ರಮ ಸಕ್ರಮದಡಿ ಮಂಜೂರಾದ ‘ಜಮೀನುಗಳ ಪೋಡಿ ಅಳತೆ ಕಾರ್ಯವನ್ನು ಸರ್ಕಾರಿ ಭೂಮಾಪಕರು ಮಾತ್ರ ನಿರ್ವಹಿಸುತ್ತಿರುತ್ತಾರೆ. ಸದರಿ ಕಾರ್ಯವನ್ನು ಪರವಾನಗಿ ಭೂಮಾಪಕರಿಗೆ ನೀಡುವ ಕುರಿತು ಇಲಾಖೆಯಲ್ಲಿ ಪ್ರಸ್ತಾವನೆಯಿರುವುದಿಲ್ಲ ಎಂದು ಸಚಿವರು ಉತ್ತರಿಸಿದರು.
ಶಾಸಕಿ ಭಾಗೀರಥಿಯವರು ನಮೂನೆ ೧-೫ ತಯಾರಿಕೆಯಲ್ಲಿ ಹಾಗೂ ೬-೧೦ ವಿಳಂಬವಾಗಲುತ್ತಿರುವುದರಿಂದ ಈ ಪ್ರಕ್ರಿಯೆ ಯನ್ನು – ಸರಳೀಕರಣಗೊಳಿಸಿ ತ್ವರಿತಗತಿಯಲ್ಲಿ ಪೋಡಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದಾಗ ಇದಕ್ಕೆ ವಿವರವಾಗಿ ಉತ್ತರ ನೀಡಿದ ಸಚಿವರು
ಮಂಜೂರಿ ಜಮೀನಿನ ಪೋಡಿ ಕುರಿತು ನಮೂನೆ ೧-೫ ಹಾಗೂ ೬-೧೦ ಭರ್ತಿ ಮಾಡುವ ಪ್ರಕ್ರಿಯೆಯನ್ನು -ತ್ವರಿತಗತಿಯಲ್ಲಿ ಪೋಡಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳದಿರುವುದಕ್ಕೆ ಸಕಾರಣಗಳು ಇರುವುದಿಲ್ಲ.
ತ್ವರಿತಗತಿಯಲ್ಲಿ ಪೋಡಿ ಮಾಡಲು ಸರ್ಕಾರವು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಕೆಲವು ತುರ್ತು ಮತ್ತು ವಿಶೇಷ ಸಂದರ್ಭಗಳಲ್ಲಿ ನಮೂನೆ ೧ ರಿಂದ ೫ ಭರ್ತಿ ಮಾಡಿ, ಧೃಡೀಕರಿಸಿ, ಕೇವಲ ಅರ್ಜಿದಾರರ ಮಂಜೂರಿಯ ನೈಜತೆಯನ್ನು ಪರಿಶೀಲಿಸಿ, ಏಕವ್ಯಕ್ತಿಗೆ ಪೋಡಿ ಮಾಡಲು ಅದೇಶಿಸುವ ಅಧಿಕಾರವನ್ನು ಪ್ರತ್ಯಾಯೋಜಿಸಿ ಆದೇಶಿಸಿದೆ . ತಹಶೀಲ್ದಾರರಿಗೆ
ಮೂಲ ಮಂಜೂರಿ ಕಡತ ಲಭ್ಯವಿಲ್ಲದ ಪ್ರಕರಣಗಳಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಗೈರು ವಿಲೇ ಕಡತ ಪುನರ್ ನಿರ್ಮಾಣದ ಸಮಿತಿಯಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಕಂದಾಯ ಇಲಾಖೆಯಿಂದ ಸರ್ಕಾರಿ ಜಮೀನುಗಳ ಪಹಣಿ ಒಟ್ಟುಗೂಡಿಸಿ ತಿದ್ದುಪಡಿ ಮಾಡುವ ಬಗ್ಗೆ ಕಂದಾಯ ಅದಾಲತ್ ಗಳನ್ನು ನಡೆಸಲಾಗುತ್ತಿದೆ.ಕಂದಾಯ ಇಲಾಖೆಯ ಅಭಿಲೇಖಾಲಯದ ಎಲ್ಲಾ ಮಂಜೂರಾತಿಗೆ ಸಂಬಂಧಿಸಿದ ಕಡತಗಳನ್ನು ಕ್ಯಾಟಲೋಗಿಂಗ್ &ಇಂಡೆಕ್ಸ್ ಮಾಡಲು ಸರ್ಕಾರದಿಂದ ಸೂಚಿಸಿದ್ದು, ಅದರಂತೆ ಕಂದಾಯ ಇಲಾಖೆಯಿಂದ ಕ್ರಮ ವಹಿಸಲಾಗುತ್ತಿದೆ.
ಪಹಣಿಯಲ್ಲಿನ ಮಾಲಿಕರ ಹೆಸರು/ಪೌತಿ ಖಾತೆ, ಇತ್ಯಾದಿಗಳ ಕುರಿತಂತೆ ತಿದ್ದುಪಡಿ ಮಾಡುವ ಸಂಬಂದ ಕಂದಾಯ ಇಲಾಖೆಯಿಂದ ಕಂದಾಯ ಅದಾಲತ್ ಗಳನ್ನು ನಡೆಸಲಾಗುತ್ತಿದೆ.
ನಮೂನೆ ೧ ರಿಂದ ೫ ಗಳನ್ನು ಡಿಜಿಟೈಸ ಮಾಡಿ ನೇರವಾಗಿ ಮೋಜಿಣಿ ತಂತ್ರಾಂಶ ಮುಖಾಂತರ ಅಳತೆ ಮಾಡಿ ನಮೂನೆ ೬ ರಿಂದ ೧೦ ಗಳನ್ನು ತಯಾರಿಸುವು ದನ್ನು ಅಂದೋಲನ ರೂಪದಲ್ಲಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಂಜೂರಿ ಜಮೀನುಗಳ ಪೋಡಿ ದುರಸ್ತಿ ಕಾರ್ಯ ವನ್ನು ಸಂಪೂರ್ಣವಾಗಿ ಆನ್.ಲೈನ್ ಮುಖಾಂತರ ಪಾರದರ್ಶಕವಾಗಿ ನಿರ್ವಹಿಸುವ ಸಲುವಾಗಿ ಭೂಮಿ ಉಸ್ತುವಾರಿ ಕೋಶದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ತಂತ್ರಾಂಶವನ್ನು
ವಿಡಿಯೋ ಸಂವಾದ ಮತ್ತು ವಿಭಾಗವಾರು ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಿ ಹೆಚ್ಚಿನ ಪ್ರಗತಿ ಸಾಧಿಸಲು ಸೂಕ್ತ ಮಾರ್ಗದರ್ಶನ ಮತ್ತು ಅಗತ್ಯ ಸೂಚನೆ ನೀಡಲಾಗುತ್ತಿದೆ. ೨/೨
ಹೆಚ್ಚಿನ ಪ್ರಕರಣಗಳು ಬಾಕಿ ಇರುವ ತಾಲ್ಲೂಕುಗಳಿಗೆ ಕಡಿಮೆ ಪ್ರಕರಣಗಳು ಬಾಕಿ ಇರುವ ತಾಲ್ಲೂಕಿನಿಂದ ಭೂಮಾಪಕರನ್ನು ನಿಯೋಜನೆ ಮಾಡಿ ಪ್ರಕರಣ ಗಳನ್ನು ವಿಲೇಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವರು ಉತ್ತರಿಸಿದ್ದಾರೆ.