ಅರಂತೋಡು: ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಅರಂತೋಡು ತೆಕ್ಕಿಲ್ ಗ್ರಾಮೀಣಾವೃದ್ಧಿ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.ಈ ಸಂಧರ್ಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಕೋಶಾಧಿಕಾರಿ ಟಿ.ಎಂ ಜಾವೇದ್ ತೆಕ್ಕಿಲ್, ಸುಳ್ಯ ತಾಲೂಕು
ಅಲ್ಪ ಸಂಖ್ಯಾತರ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಉಪಾಧ್ಯಕ್ಷ ಎಸ್.ಕೆ ಹನೀಫ್ ಸಂಪಾಜೆ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ.ಎಸ್ ಉಮ್ಮರ್, ಶರೀಫ್ ಕಂಠಿ, ಸಿದ್ಧೀಕ್ ಕೊಕ್ಕೊ, ಉಧ್ಯಮಿ ಸಲೀಂ ಪೆರಂಗೋಡಿ, ರಶೀದ್ ಜಟ್ಟಿಪಳ್ಳ, ಕಲ್ಲುಗುಂಡಿ ಜುಮಾ ಮಸೀದಿ ಅಧ್ಯಕ್ಷ ಆಲಿಹಾಜಿ ತಾಜುದ್ಧೀನ್ ಅರಂತೋಡು, ಇಕ್ಬಾಲ್ ಸುಣ್ಣಮೂಲೆ ಮೊದಲಾದವರು ಉಪಸ್ಥಿತರಿದ್ದರು.ಸಂಪಾಜೆ, ಅರಂತೋಡು ಎಲಿಮಲೆ ರಸ್ತೆ, ಮತ್ತು ಸುಳ್ಯದ ಹಲವಾರು ಬೇಡಿಕೆಗಳನ್ನು ಸಚಿವರ ಮುಂದಿಟ್ಟು ಹೆಚ್ಚು ಅನುದಾನಕ್ಕೆ ವಿನಂತಿಸಲಾಯಿತು.