ಪಂಜ:ಪಂಜ ಪರಿಸರದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ದಿ. ಬಾಲಕೃಷ್ಣ ಗೌಡ ಕುದ್ವ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಪಂಜ ಲಯನ್ಸ್ ಭವನದಲ್ಲಿ ನಡೆಯಿತು. ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ , ಲಯನ್ಸ್ ಕ್ಲಬ್ ವತಿಯಿಂದ
ತುಕರಾಮ ಏನೆಕಲ್, ಆರಾಧನಾ ಸಮಿತಿಯಿಂದ ಹಾಗೂ ಜೇಸಿ ವತಿಯಿಂದ ಸವಿತಾರ ಮುಡೂರು,ಶಾರದಾಂಬ ಭಜನಾ ಮಂಡಳಿ ವತಿಯಿಂದ ಪರಮೇಶ್ವರ ಬಿಳಿಮಲೆ ಹಾಗೂ ಪಂಚಶ್ರೀ ಸ್ಪೋರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪವನ್ ಪಲಡ್ಕತ್ತ ನುಡಿನಮನ ಸಲ್ಲಿಸಿದರು. ಹಿರಿಯರಾದ ಸೀತಾರಾಮ ಕುದ್ವ ದೀಪ ಬೆಳಗಿಸಿದರು. ಶಶಿಧರ್ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು.ಲಯನ್ಸ್ ಅಧ್ಯಕ್ಷರು,ಸದಸ್ಯರು, ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯರು, ಆರಾಧನಾ ಸಮಿತಿ ಸದಸ್ಯರು, ಜೆಸಿ ಅಧ್ಯಕ್ಷರು ಸದಸ್ಯರು,ಶಾರದಾಂಬ ಭಜನಾ ಮಂಡಳಿ ಸದಸ್ಯರು, ಪಂಚಸ್ರೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು,ಸದಸ್ಯರು, ದಿ.ಬಾಲಕೃಷ್ಣ ಕುದ್ವರವರ ಮನೆಯವರು, ಊರವರು ಉಪಸ್ಥಿತರಿದ್ದರು.








