ಸುಳ್ಯ:ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಡಾ.ಕುರಂಜಿ ವೆಂಕಟರಮಣ ಗೌಡರ 12ನೇ ವರ್ಷದ ಪುಣ್ಯ ಸ್ಮರಣೆಯನ್ನು ಮಾಡಲಾಯಿತು. ಕೆ ವಿ ಜಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು. ಶಾಲಾ
ಪ್ರಾಂಶುಪಾಲ ಅರಣ್ ಕುಮಾರ್ ಕೆವಿಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಾರ್ಪಣೆ ಮಾಡಿದರು.ಉಪ ಪ್ರಾಂಶುಪಾಲರಾದ ಶಿಲ್ಪ ಬಿದ್ದಪ್ಪ ಪುಷ್ಪ ನಮನ ಸಲ್ಲಿಸಿ ಗೌರವಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಪುಷ್ಪ ನಮನವನ್ನು ಅರ್ಪಿಸಿ, ಗೌರವ ಸಲ್ಲಿಸಿದರು.














