ಸುಳ್ಯ:ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಸಂಶೋಧನಾ ಕೇಂದ್ರ ಮತ್ತು ಕಂಪ್ಯೂಟರ್ ಸೈನ್ಸ್ (ಆರ್ಟಿಫಿಷಿಯಲ್ ಇಂಟೆಲಿಜೆಂಟ್ಸ್ & ಮೆಷಿನ್ ಲರ್ನಿಂಗ್) ವಿಭಾಗದ ವತಿಯಿಂದ ‘ಮೆಷಿನ್ ಲರ್ನಿಂಗ್ ಮೋಡೆಲ್ಸ್ & ಪ್ರಾಕ್ಟೀಸ್’ ಎಂಬ ವಿಷಯದಲ್ಲಿ ಒಂದು ದಿನದ
ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿ ಡಾ. ಸುಬ್ರಮಣ್ಯ ಭಟ್, ಅಸೋಸಿಯೇಟ್ ಪ್ರೊಫೆಸರ್, ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಕಾರ್ಯಾಗಾರವನ್ನು ನಡೆಸಿಕೊಟ್ಟರು ರೀಸರ್ಚ್ ಮತ್ತು ವಿಭಾಗ ಮುಖ್ಯಸ್ಥರಾದ
ಡಾ. ಸವಿತಾ ಸಿ.ಕೆ. ಸ್ವಾಗತಿಸಿ, ಪ್ರೊ. ವೆಂಕಟೇಶ್ ಯು.ಸಿ. ರೀಸರ್ಚ್ ಸಂಯೋಜಕರು,ಮಾರ್ಗಸೂಚಿಯನ್ನು ವಿವರಿಸಿದರು. ಪ್ರಾಂಶುಪಾಲರಾದ ಡಾ. ಸುರೇಶ ವಿ. ಕಾರ್ಯಾಗಾರದ ಉಪಯುಕ್ತತೆಯ ಬಗ್ಗೆ ಮಾಹಿತಿ ಕೊಟ್ಟರು.ಉಪಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ. ಶುಭಹಾರೈಸಿದರು. ವಿದ್ಯಾರ್ಥಿನಿ ಕೀರ್ತಿಶ್ರೀ ವಂದಿಸಿದರು. ತಹಕೌಸರ್ ಕಾರ್ಯಕ್ರ ನಿರೂಪಿಸಿದರು. ಎಲ್ಲಾ ವಿಭಾಗಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು,, ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳು ತರಬೇತಿಯನ್ನು ಪಡೆದರು.