ಗುತ್ತಿಗಾರು:ಗುತ್ತಿಗಾರಿನ ದೇವಮಾತಾ ಕಾಂಪ್ಲೆಕ್ಸ್ನಲ್ಲಿ ಕೆ.ವಿ.ಜಿ. ದಂತಮಹಾವಿದ್ಯಾಲಯದ ಆಶ್ರಯದಲ್ಲಿ ನೂತನ ಮಲ್ಟಿ ಸ್ಪಷಾಲಿಟಿ ಡೆಂಟಲ್ ಕ್ಲಿನಿಕ್ ಉದ್ಘಾಟನೆಗೊಂಡುತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ‘ಬಿ’ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಉದ್ಘಾಟಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ
ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಮೋಹನ್ ರಾಮ್ ಸುಳ್ಳಿ, ಕಾಂಪ್ಕೋ ನಿರ್ದೇಶಕ ಎ.ವಿ. ತೀರ್ಥರಾಮ, ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ನಿರ್ದೇಶಕ ಪಿ.ಸಿ. ಜಯರಾಮ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಎಓಎಲ್ ಇ ಕಮಿಟಿ ‘ಬಿ’ ಕಾರ್ಯದರ್ಶಿ ಡಾ.ಜ್ಯೋತಿ ಆರ್.ಪ್ರಸಾದ್, ಕೆವಿಜಿ ದಂತಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಮೌರ್ಯ ಆರ್.ಕುರುಂಜಿ ಶುಭ ಹಾರೈಸಿದರು. ಕಾಲೇಜಿನ

ಪ್ರಾಂಶುಪಾಲೆ ಡಾ.ಮೋಕ್ಷಾ ನಾಯಕ್ ಸ್ವಾಗತಿಸಿ, ವಿಭಾಗ ಮುಖ್ಯಸ್ಥೆ ಡಾ.ನುಸ್ರತ್ ಫರೀದ್ ವಂದಿಸಿದರು. ಕೆವಿಜಿ ದಂತಮಹಾವಿದ್ಯಾಲಯದ ವಿಭಾಗ ಮುಖ್ಯಸ್ಥರಾದ ಡಾ. ಸುಹಾಸ್ ರಾವ್, ಪ್ರಾಧ್ಯಾಪಕರುಗಳಾದ ಡಾ. ಹೇಮಂತ್ ಬಟ್ಟೂರು, ಡಾ: ಮನೋಜ್ ಕುಮಾರ್ ಅಡ್ಡಂತಡ್ಕ, ಡಾ.ಕೃಪಾಲ್ ರೈ, ಡಾ.ಸುಮನ್ ಬಿ. ಆಡಳಿತಾಧಿಕಾರಿ ಮಾಧವ ಬಿ.ಟಿ., ಕಟ್ಟಡ ಮಾಲಕ ಬೋಬಿ ಅಲೆಕ್ಸ್ ಉಪಸ್ಥಿತರಿದ್ದರು. ಎಓಎಲ್ ಇ ಕಮಿಟಿ ‘ಬಿ’ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.








