ಸುಳ್ಯ: ಸಾಂಸ್ಕೃತಿಕ ಸಂಘ ಹಳೆಗೇಟು ಇದರ ವತಿಯಿಂದ 43ನೇ ವರ್ಷದ ಶ್ರೀ ಗಣೇಶೋತ್ಸವಸಾಂಸ್ಕೃತಿಕ ಸಂಘ ವಸಂತಕಟ್ಟೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಕಾರ್ಯಕ್ರಮದೊಂದಿಗೆ

ನಡೆಯಲಿದೆ 3 ದಿನಗಳ ಗಣೇಶೋತ್ಸವ ಇಂದಿನಿಂದ ಆರಂಭಗೊಂಡಿದೆ. ಬೆಳಿಗ್ಗೆ ಗಣಪತಿ ಹೋಮ, ವಿಗ್ರಹ ಪ್ರತಿಷ್ಠಾಪನೆ, ಪೂಜೆ, ಮಧ್ಯಾಹ್ನ
ಮಹಾಪೂಜೆ ನಡೆಯಿತು.ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಉದ್ಘಾಟನಾ ಸಮಾರಂಭ ನಡೆಯಲಿದೆ.ಬಳಿಕ ಭ್ರಾಮರಿ ನಾಟ್ಯಾಲಯ ಕುಕ್ಕುಜಡ್ಕ ನೇತೃತ್ವದಲ್ಲಿ ವಿದುಷಿ ಜಯಶ್ರೀ ತೇಜಸ್ವಿ ತಂಡದಿಂದ ನೃತ್ಯ ವೈಭವ ನಡೆಯಲಿದೆ.











