ಸುಳ್ಯ:ವೈಭವದ ಶೋಭಾಯಾತ್ರೆಯೊಂದಿಗೆ ಹಳೆಗೇಟು ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಪನ್ನಗೊಂಡಿತು.ಸಾಂಸ್ಕೃತಿಕ ಸಂಘದ ವಸಂತಕಟ್ಟೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಕಾರ್ಯಕ್ರಮದೊಂದಿಗೆ ಮೂರು ದಿನಗಳ

ಕಾಲ ನಡೆದ ಗಣೇಶೋತ್ಸವದ ಕೊನೆಯ ದಿನವಾದ
ಸೆ.16ರಂದು ಬೆಳಿಗ್ಗೆ ಪೂಜೆ,ಮಧ್ಯಾಹ್ನ ಮಹಾಪೂಜೆ ನಡೆದು ಅನ್ನಪ್ರಸಾದ ಸಂತರ್ಪಣೆ ನೇಯಿತು.ನೂರಾರು ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು.ಸಂಜೆ ಸುಳ್ಯ ನಗರದಲ್ಲಿ ಗಣೇಶ ವಿಗ್ರಹ ವಿಸರ್ಜನಾ ಶೋಭಾ ಯಾತ್ರೆ ನಡೆಯಿತು. ಶೋಭಾಯಾತ್ರೆಗೆ ಸಿಡಿಮದ್ದು ಪ್ರದರ್ಶನ, ನಾಸಿಕ್ ಬ್ಯಾಂಡ್, ಚೆಂಡೆ ವಾದ್ಯ ಮೇಳಗಳು ಮೆರುಗು ನೀಡಿತು.ರಾತ್ರಿ ಬ್ರಹ್ಮರಗಯದಲ್ಲಿ ಕಂದಡ್ಕ ಹೊಳೆಯಲ್ಲಿ ಗಣೇಶ ವಿಗ್ರಹ ಜಲಸ್ತಂಭನಗೊಳಿಸುವುದರೊಂದಿಗೆ ಗಣೇಶೋತ್ಸವ ಸಂಪನ್ನಗೊಂಡಿತು.











