ಕಾಸರಗೋಡು:ಯುಡಿಎಫ್ ಚುನಾವಣಾ ಭರವಸೆಯಾದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ ಪ್ರಿಯದರ್ಶಿನಿ’ಯೋಜನೆಗೆ ಜೂ.15ರಂದು ಚಾಲನೆ ದೊರೆತಿದೆ. ಯೋಜನೆಯನ್ನು ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ವಿ. ಡಿ. ಸತೀಶನ್ ಉದ್ಘಾಟಿಸಿದರು.ರಾಜ್ಯದ ವಿವಿಧ ಭಾಗಗಳಲ್ಲಿ
ಸ್ಥಳೀಯವಾಗಿ ಶಾಸಕರು ಹಾಗು ಜನಪ್ರತಿನಿಧಿಗಳು ಚಾಲನೆ ನೀಡಿದರು.ಕಾಸರಗೋಡು ಜಿಲ್ಲೆಯ 126 ಬಸ್ಗಳಲ್ಲಿ ಈ ಸೌಲಭ್ಯ ಸಿಗಲಿದೆ. ಕಾಸರಗೋಡು-ಮಂಗಳೂರು, ಕಾಸರಗೋಡು- ಸುಳ್ಯ, ಕಾಸರಗೋಡು- ಪುತ್ತೂರು ಅಂತರಾಜ್ಯ ರೂಟಿನ ಕೇರಳ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ. ಕಾಸರಗೋಡನಿಂದ ಮಂಗಳೂರು, ಪುತ್ತೂರು, ಸುಳ್ಯ ಕಡೆಗೆ ಅಂತರಾಜ್ಯ ಪ್ರಯಾಣ ದೖನಂದಿನ ನಡೆಸುವ ವಿದ್ಯಾರ್ಥಿಗಳಿಗೆ ಸಹಿತ ಮಹಿಳೆಯರಿಗೆ ಈ ಯೋಜನೆ ವರದಾನವಾಗಿದೆ.
ಉಚಿತ ಪ್ರಯಾಣ ಸೌಲಭ್ಯ ದೊರೆಯುವ ಬಸ್ ಗಳನ್ನು ಗುರುತಿಸಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್ಸಿನ ಮುಂಭಾಗ ಮತ್ತು ಮುಂಬದಿಯ ಬಾಗಿಲಿನ ಹತ್ತಿರದಲ್ಲಿ ‘ ಪ್ರಿಯದರ್ಶಿನಿ ಮಹಿಳಾ ಉಚಿತ ಪ್ರಯಾಣ’ಎಂಬ ಸ್ಟಿಕ್ಕರ್ ಲಗತ್ತಿಸಲಾಗುತ್ತಿದೆ. ಸ್ಟಿಕ್ಕರ್ ಇಲ್ಲದ ಬಸ್ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ದೊರೆಯದು.















