ಸುಳ್ಯ: ಸುಳ್ಯ ತಾಲೂಕು ಪಂಚಾಯಿತಿ ಕೆಡಿಪಿ ನಾಮ ನಿರ್ದೇಶನ ಸದಸ್ಯರಾಗಿ 6 ಮಂದಿಯನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ.ವಿವಿಧ ಗ್ರಾಮಗಳ ಕಾಂಗ್ರೆಸ್ ಪ್ರಮುಖರನ್ನು ಗುರುತಿಸಿ ನಾಮನಿರ್ದೇಶನ ಮಾಡಲಾಗಿದೆ. ಸುಳ್ಯ ಬ್ಲಾಕ್ ಕಾಂಗ್ರೆಸ್

ಶಿಫಾರಸ್ಸಿನ ಮೇರೆಗೆ ನೇಮಕಾತಿ ಆಗಿದೆ. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ) ಸಮಿತಿ ಸದಸ್ಯರಾಗಿ ಆಲೆಟ್ಟಿಯ ಧರ್ಮಪಾಲ ಕೊಯಿಂಗಾಜೆ, ಐವರ್ನಾಡಿನ ಜಯಪ್ರಕಾಶ್ ನೇಕ್ರಪಾಡಿ, ಗುತ್ತಿಗಾರಿನ ಪರಮೇಶ್ವರ ಕೆಂಬಾರೆ, ಜಾಲ್ಸೂರಿನ ತೀರ್ಥರಾಮ ಬಾಳಾಜೆ, ಅರಂತೋಡಿನ ಆಶ್ರಫ್ ಗುಂಡಿ, ಬೆಳ್ಳಾರೆಯ ಶಕುಂತಳಾ ನಾಗರಾಜ್ ಇವರನ್ನು ಸರಕಾರ ನೇಮಕ ಮಾಡಿದೆ.