ಸುಳ್ಯ:ದ.ಕ ಜಿಲ್ಲಾ ಪಂಚಾಯತ್ ಗ್ರಾಮೀಣ ಕೈಗಾರಿಕಾ ವಿಭಾಗದ ವತಿಯಿಂದ ಉಚಿತ ಸಲಕರಣೆ ವಿತರಣೆ ಕಾರ್ಯಕ್ರಮ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ ಸಲಕರಣೆ ವಿತರಿಸಿ ಮಾತನಾಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಕಿಟ್ ಸಿಕ್ಕಿದ್ದು ಇದೀಗ
ಕಮ್ಮಾರಿಕೆ,ಕಾರ್ಪೆಂಟರ್,ಗಾರೆ ಕೆಲಸ,ಅಕ್ಕಸಾಲಿಗ ಎಲೆಕ್ಟ್ರಿಕ್ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಸೇರಿದಂತೆ ಸುಧಾರಿತ ಸಲಕರಣೆಗಳನ್ನು ನೀಡಲಾಗಿದ್ದು ಸ್ವಾವಲಂಬನೆ ಮೂಲಕ ಪ್ರತಿಯೊಬ್ಬರು ಬೆಳೆಯಬೇಕು ಎಂದು ಹೇಳಿದರು. ಇಂತಹ ವಿದ್ಯೆಗಳನ್ನು ಕಲಿತು ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು. ವೃತ್ತಿಯ ಬಗ್ಗೆ ಗೌರವ ಇರಲಿ, ಪ್ರೀತಿಯಿಂದ ಕೆಲಸ ಮಾಡಬೇಕು, ಸಿಕ್ಕ ಸಲಕರಣೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಶುಭ ಹಾರೈಸಿದರು.ಗ್ರಾಮೀಣ ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಹೆಗ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಈ ಸಂಧರ್ಭದಲ್ಲಿ 101 ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಯಿತು.






