ಕೊಚ್ಚಿ:ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಜಿ.ಜಾರ್ಜ್ (78) ನಿಧನರಾಗಿದ್ದಾರೆ. ಪಾರ್ಶ್ವವಾಯುನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ. ಹಲವಾರು ಹಿಟ್ ಹಾಗೂ ಜನಪ್ರಿಯ ಕಲಾತ್ಮಕ ಚಲನಚಿತ್ರಗಳನ್ನು ಅವರು
ನಿರ್ದೇಶಿಸಿದ್ದಾರೆ. ಕೆ.ಜಿ.ಜಾರ್ಜ್ ಅವರು
ಸ್ವಪ್ನಾಡನಂ, ಯವನಿಕ, ಉಲ್ಕಡಲ್, ಕೋಲಙಳ್, ಮೇಳ, ಲೇಖಯುಡೆ ಮರಣಂ ಒರು ಪ್ಲಾಶ್ಬ್ಯಾಕ್, ಆದಾಮಿಂಡೆ ವಾರಿಯೆಲ್ಲ್, ಪಂಜವಡಿಪಾಲಂ ಸೇರಿ 19 ಚಿತ್ರಗಳನ್ನು ನಿರ್ದೇಶಿಸಿದ್ದಾರೆ.1998ರಲ್ಲಿ ಬಿಡುಗಡೆಗೊಂಡ ಇಲವಂಗೋಡ್ ದೇಶ ಕೊನೆಯದಾಗಿ ನಿರ್ದೇಶನ ಮಾಡಿದ ಚಿತ್ರ. ರಾಷ್ಟ್ರೀಯ ಹಾಗೂ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ.