ಸುಳ್ಯ:ಸುಳ್ಯದ ಜಟ್ಟಿಪಳ್ಳ- ಕೊಡಿಯಾಲಬೈಲು ರಸ್ತೆಯನ್ನು ಅಮೃತ್ 2 ಯೋಜನೆಯಡಿಯಲ್ಲಿ ಪೈಪ್ ಅಳವಡಿಸಲು ಅಗೆದು ಸರಿಯಾಗಿ ಮುಚ್ಚದೆ ಸಂಚಾರ ದುಸ್ತರವಾಗಿದ್ದು ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ನಗರ ಪಂಚಾಯತ್ಗೆ ಊರವರು ಮನವಿ ಮಾಡಿದ್ದಾರೆ. ಸದ್ಯಕ್ಕೆ ಹೊಂಡ ಮುಚ್ಚುವ ಹಾಗೂ ಮಳೆಗಾಲ ಕಳೆದ ತಕ್ಷಣ ಈ ಹಿಂದಿನಂತೆ ರಸ್ತೆ ಯೋಗ್ಯವನ್ನಾಗಿಸುವುದಾಗಿ
ನಗರಾಡಳಿತ ಭರವಸೆ ನೀಡಿದೆ.ಜಟ್ಟಿಪಳ್ಳ ಕೊಡಿಯಾಲಬೈಲು ರಸ್ತೆಯ ಮಧ್ಯಭಾಗವನ್ನು ಅಲ್ಲಲ್ಲಿ ಕಡಿದು ಪೈಪು ಅಳವಡಿಸಲಾಗಿದೆ.ಜಟ್ಟಿಪಳ್ಳ – ಬೊಳಿಯಮಜಲು ಡಿವೈಡ್ ರಸ್ತೆ ಬಳಿಯಿಂದ ಕೊಡಿಯಾಲಬೈಲು ಹೊಳೆಯವರೆಗೆ ಸುಮಾರು ಹತ್ತು ಸ್ಥಳಗಳಲ್ಲಿ ಕಣಿಮಾಡಲಾಗಿದೆ. ಸಂಚಾರಕ್ಕೆ ತೊಂದರೆಯಾಗಿದೆ.
ಈ ರಸ್ತೆಯಲ್ಲಿ ಸಾವಿರಾರು ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವುದು ಶಾಲೆ ಕಾಲೇಜು ಮಕ್ಕಳು ತೆರಳುವ ವಾಹನಗಳು ಸಂಚರಿಸುವುದರಿಂದ ರಸ್ತೆಯನ್ನು ಹೀಗೆ ಅಗೆದ ಪರಿಣಾಮ ಇಲ್ಲಿ ಅಪಘಾತಗಳು ಆಗಾಗ್ಗೆ ಆಗುತ್ತಿದೆ. ಆದ್ದರಿಂದ ಕೂಡಲೇ ರಸ್ತೆಯನ್ನು ಸರಿಪಡಿಸಿ ಕೊಡಬೇಕೆಂದು ಜಟ್ಟಿಪಳ್ಳ ಕೊಡಿಯಾಲಬೈಲು ಪರಿಸರದ ನಾಗರಿಕರು ನಗರ ಪಂಚಾಯತ್ ಗೆ ಮನವಿ ಮಾಡಿಕೊಂಡಿದ್ದಾರೆ. ಮನವಿ ಸ್ವೀಕರಿಸಿದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಮುಖ್ಯಾಧಿಕಾರಿ ಸುಧಾಕರ ರವರು ಎರಡು ದಿನದಲ್ಲಿ ಆ ರಸ್ತೆಯನ್ನು ತಾತ್ಕಾಲಿಕ ದುರಸ್ತಿ ಪಡಿಸಿಕೊಡುತ್ತೇವೆ ಹಾಗೂ ಮಳೆಗಾಲ ಕಳೆದ ತಕ್ಷಣ ರಸ್ತೆ ಸರಿಪಡಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಡೇವಿಡ್ ದೀರಾ ಕ್ರಾಸ್ತ ಇದ್ದರು.
ಜಟ್ಟಿಪಳ್ಳ ಸಾರ್ವಜನಿಕ ಪರವಾಗಿ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಸಿ ಎಫ್ ಸಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಉದ್ಯಮಿ ಶಿಹಾಬ್ ಷಾ, ಮೊಯ್ದೀನ್, ಖಲೀಲ್ ,ಶಿಹಾಬ್,ಮೊದಲಾದವರು ಉಪಸ್ಥಿತರಿದ್ದರು