ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಕದನ ವಿರಾಮವನ್ನು ಇಸ್ರೇಲ್ ಮತ್ತು ಇರಾನ್ ಮಂಗಳವಾರ ಒಪ್ಪಿಕೊಂಡಿವೆ.ಆ ಮೂಲಕ ಮಧ್ಯಪ್ರಾಚ್ಯವನ್ನು ಬೆಚ್ಚಿಬೀಳಿಸಿದ 12 ದಿನಗಳ ಯುದ್ಧ ‘ತಾಂತ್ರಿಕ’ವಾಗಿ ಕೊನೆಗೊಂಡಿದೆ.ಪರಮಾಣು ಕೇಂದ್ರಗಳ ಮೇಲೆ ದಾಳಿಗೆ ಪ್ರತೀಕಾರವಾಗಿ, ಕತಾರ್ನಲ್ಲಿರುವ ಅಮೆರಿಕದ
ಸೇನಾ ನೆಲೆಗಳ ಮೇಲೆ ಸೋಮವಾರ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಏರ್ಪಟ್ಟಿದೆ ಎಂದು ಟ್ರಂಪ್ ಘೋಷಿಸಿದ್ದರು.ಇದರ ಬಳಿಕ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಇಸ್ರೇಲ್ ಕೂಡ ಬೆಳಗಿನ ಜಾವ ಇರಾನ್ ಮೇಲೆ ದಾಳಿ ನಡೆಸಿತು. ಈ ಬಳಿಕ ಎರಡೂ ರಾಷ್ಟ್ರಗಳು ಕದನ ವಿರಾಮವನ್ನು ಒಪ್ಪಿಕೊಂಡವು.
ಎಂದು ವರದಿಯಾಗಿದೆ.
ಟ್ರಂಪ್ ಅವರ ಸಮನ್ವಯದೊಂದಿಗೆ ಇಸ್ರೇಲ್ ಇರಾನ್ನೊಂದಿಗೆ ದ್ವಿಪಕ್ಷೀಯ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.ಕದನ ವಿರಾಮದ ಯಾವುದೇ ಉಲ್ಲಂಘನೆಗೆ ಇಸ್ರೇಲ್ ಬಲವಾಗಿ ಪ್ರತಿಕ್ರಿಯಿಸಲಿದೆ ಎಂದು ನೆತನ್ಯಾಹು ಹೇಳಿದ್ದಾರೆ.