ಪಂಜ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಮಟ್ಟದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ವಿಚಾರ ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಡಿ.27ರಂದು ಪಂಜ ವಲಯದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಉದ್ಘಾಟಿಸಿ ಶುಭ ಹಾರೈಸಿದರು.ಮಕ್ಕಳು ಸಂಸ್ಕಾರ ಸಂಸ್ಕೃತಿಗಳನ್ನು
ಮೈಗೂಡಿಸಿಕೊಂಡು ಬೆಳೆದಾಗ ಉತ್ತಮ ಪ್ರಜೆಗಳಾಗಿ ಬಾಳಲು ಸಾಧ್ಯ. ಅವರನ್ನು ಈ ರೀತಿ ರೂಪಿಸಲು ತಾಯಿಯಂದಿರು ಮುಖ್ಯ ಕಾರಣರಾಗುತ್ತಾರೆ. ಆದ್ದರಿಂದ ಮಹಿಳೆಯರಿಗೆ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ ಎಂದು ಹೇಳಿದರು.ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ನಳಿನಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ 2 ಜಿಲ್ಲೆಯ ನಿರ್ದೇಶಕರಾದ ಪ್ರವೀಣ್ ಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಹಾಗೂ

ಜ್ಞಾನವಿಕಾಸ ಕಾರ್ಯಕ್ರಮದ ಉದ್ದೇಶ ಮತ್ತು ಜಾನವಿಕಾಸ ಕಾರ್ಯಕ್ರಮದಿಂದ ಮಹಿಳೆಯರಲ್ಲಾದ ಬದಲಾವಣೆಗಳ ಬಗ್ಗೆ ತಿಳಿಸಿದರು. ಪೈಲಾರು ಶ್ರೀ ಲಕ್ಷ್ಮೀ ಜ್ಞಾನ ವಿಕಾಸ ಕೇಂದ್ರ ಸದಸ್ಯರಾದ ಮನೋರಮಾ ಅನಿಸಿಕೆ ವ್ಯಕ್ತಪಡಿಸಿದರು. ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರು ಸುರೇಶ್ ಕಣೆಮರಡ್ಕ ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳು, ಜನರಿಗೆ ದೊರಕುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಎಣ್ಣೆಮಜಲು ನಾಟಿ ವೈಧ್ಯೆ ಬಾಲಕ್ಕ, ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಜ್ಞಾನವಿಕಾಸ ಕೇಂದ್ರದ ಸದಸ್ಯರನ್ನು ಗೌರವಿಸಲಾಯಿತು. ಕುಟುಂಬದ ಸಂಸ್ಕೃತಿ ಮತ್ತು ಸಂಸ್ಕಾರದ ಅನುಷ್ಠಾನದಲ್ಲಿ ಮಹಿಳೆಯರ ಪಾತ್ರ ಈ ವಿಚಾರ ಗೋಷ್ಠಿಯನ್ನು ಶ್ರೀದೇವಿ ನಾಗರಾಜ್ ಭಟ್, ಕಾರ್ಯದರ್ಶಿಗಳು, ವೇದ ಮತ್ತು ಕಲಾ ಪ್ರತಿಷ್ಠಾನ ಇವರು ನೆರವೇರಿಸಿದರು. ಹಾಗೂ ತ್ರಿವೇಣಿ, ಆಧ್ಯಾತ್ಮಿಕ ಸಂಯೋಜಕಿ, ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆ, ಚೊಕ್ಕಾಡಿ ಹಾಗೂ ಶ್ರೀಮತಿ ನಾಗರತ್ನ ದಯಾನಂದ , ಪರ್ಫೆಕ್ಟ್ ಬ್ಯೂಟಿ ಪಾರ್ಲರ್ ಸುಳ್ಯ ಇವರು ಸ್ವ ಉದ್ಯೋಗದ ಬಗ್ಗೆ ತಮ್ಮ ಅನುಭವ ಹಂಚಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಜಳಕದ ಹೊಳೆ ಗ್ರಾಂ ಪಂಚಾಯತ್ ಅಧ್ಯಕ್ಷರು, ಪಂಜ, ಶಿವಪ್ರಸಾದ್ ಮಾದನಮನೆ, ಜನಜಾಗೃತಿ ವಲಯಾಧ್ಯಕ್ಷರು ಪಂಜ, ಶ್ರೀ ಧರ್ಮಪಾಲ ಕಣ್ಕಲ್ ವಲಯಾಧ್ಯಕ್ಷರು ಪಂಜ, ಎಲ್ಯಣ್ಣ ಗೌಡ ಕಟ್ಟ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ವಲಯಾಧ್ಯಕ್ಷರು, ತಾಲೂಕು ಯೋಜನಾಧಿಕಾರಿಗಳು ಮಾಧವ ಗೌಡ, ವಲಯ ಮೇಲ್ವಿಚಾರಕಿ ಕಲಾವತಿ, ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಲಕ್ಷ್ಮಿ, ವಲಯದ ಸೇವಾಪ್ರತಿನಿಧಿಯವರು, ಸಿ.ಎಸ್.ಸಿ ಸೇವಾದಾರು, ಒಕ್ಕೂಟದ ಅಧ್ಯಕ್ಷರು,ಪದಾಧಿಕಾರಿಗಳು, ಸದಸ್ಯರು, ತಾಲೂಕಿನ ಜ್ಞಾನವಿಕಾಸ ಕೇಂದ್ರಗಳ ಸದಸ್ಯರು ಉಪಸ್ಥಿತರಿದ್ದರು. ಜ್ಞಾನವಿಕಾಸ ಕೇಂದ್ರಗಳ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಾದ ತಂಡ ಮತ್ತು ಸದಸ್ಯರಿಗೆ ಬಹುಮಾನ ವಿತರಣೆ ಮಾಡಲಾಯಿತು.ಹಾಗೂ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು..