ಸುಳ್ಯ:ಆ.15ರಿಂದ 18ರ ತನಕ ನಡೆಯಲಿರುವ ಜಾಲ್ಸೂರು ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದ ನೂತನ ಭಜನಾ ಮಂದಿರದ ಶಿಲಾನ್ಯಾಸ ಭೂಮಿ ಪೂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ವಿಶೇಷ ಭಜನೆಯೊಂದಿಗೆ
ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಗೌಡ ನಾಯರ್ಹಿತ್ತಲು, ಉಪಾಧ್ಯಕ್ಷೆ ಹರಿಣಾಕ್ಷಿ, ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಜೊತೆ ಕಾರ್ಯದರ್ಶಿ ಉದಯಕುಮಾರ್ ಆರ್ತಾಜೆ, ಕೋಶಾಧಿಕಾರಿ ಲೀಲಾವತಿ ನಡುಮನೆ, ಸದಸ್ಯರಾದ ಪುಷ್ಪಾವತಿ ನಡುಮನೆ, ಮೋಹಿನಿ ನಡುಮನೆ,ರಕ್ಷಿತ್, ಹೇಮಂತ್, ಹಂಶಿಖ, ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ ಉಪಸ್ಥಿತರಿದ್ದರು.














