ಚೆನ್ನೈ: ಅಫ್ಗಾನಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 9 ವಿಕೆಟ್ಗಳ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾವು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಚೆನ್ನೈನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನ ತಂಡವು ನಾಯಕ
ಹಶ್ಮತುಲ್ಲಾ ಶಾಹಿದಿ (102 ರನ್: 131 ಎಸೆತ) ಮತ್ತು ಅಜ್ಮತುಲ್ಲಾ ಒಮರ್ಜಾಯ್ (50 ರನ್: 56 ಎಸೆತ) ಅವರ ಆಟದ ನೆರವಿನಿಂದ 44.2 ಓವರ್ಗಳಲ್ಲಿ 218 ರನ್ ಗಳಿಸಿತ್ತು.ಭಾರತದ ಪರ ಬಿಗಿ ಬೌಲಿಂಗ್ ದಾಳಿ ನಡೆಸಿದ ಪ್ರಸಿದ್ಧ ಕೃಷ್ಣ, 8.2 ಓವರ್ಗಳಲ್ಲಿ 23 ರನ್ಗಳಿಗೆ 5 ವಿಕೆಟ್ ಕಬಳಿಸಿದ್ದರು.
219 ರನ್ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಯಶಸ್ವಿ ಜೈಸ್ವಾಲ್ ( ಅಜೇಯ 110 ರನ್: 86 ಎಸೆತ) ಮತ್ತು ರೋಹಿತ್ ಶರ್ಮಾ (79 ರನ್: 69 ಎಸೆತ) ಮೊದಲ ವಿಕೆಟ್ಗೆ 170 ರನ್ ಜೊತೆಯಾಟವಾಡಿದರು. ಶ್ರೇಯಸ್ ಅಯ್ಯರ್ ಅಜೇಯ 20 ರನ್ ಗಳಿಸಿದರು.
ಭಾರತವು 28.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3–0 ಅಂತದಿಂದ ಗೆದ್ದಿದೆ.







