ಕೊಲಂಬೊ: ಐದು ವರ್ಷಗಳ ಬಳಿಕ ಟೀಂ ಇಂಡಿಯಾ ಏಷ್ಯಾ ಕಪ್ ಎತ್ತಿದೆ. ಕೊಲಂಬೊ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 10 ವಿಕೆಟ್ ಭರ್ಜರಿ ಜಯ ದಾಖಲಿಸಿ 8ನೇ ಬಾರಿಗೆ ಏಷ್ಯಾ ಕಪ್ ಎತ್ತಿದೆ. ಆ ಮೂಲಕ ಮುಂದಿನ ತಿಂಗಳು ನಡೆಯುವ ವಿಶ್ವಕಪ್ ಪಂದ್ಯಾವಳಿಗೆ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ. ಗೆಲುವಿಗೆ 51 ರನ್ ಸುಲಭ ಗುರಿ ಪಡೆದ ಭಾರತ 6.1 ಓವರ್ಗಳಲ್ಲಿ
ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ಆರಂಭಿಕರಾಗಿ ಕಣಕ್ಕೆ ಇಳಿದ ಶುಭಮನ್ ಗಿಲ್ 27 ರನ್ ಹಾಗೂ ಇಶಾನ್ ಕಿಸನ್ 23 ರನ್ ಗಳಿಸಿ ಅಜೇಯರಾಗಿ ಉಳಿದರು. ಗಿಲ್ 19 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 27 ರನ್ ಗಳಿಸಿದರೆ, ಇಶಾನ್ ಕಿಸನ್ 18 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 23 ರನ್ ಗಳಿಸಿ ಅಜೇಯ ಗೆಲುವು ದಾಖಲಿಸೊದರು.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ಕುಸಿದು 15.2 ಓವರ್ಗಳಲ್ಲಿ 50 ರನ್ನಗೆ ಆಲ್ ಔಟ್ ಆಯಿತು. ಮಹಮ್ಮದ್ ಸಿರಾಜ್ 7 ಓವರ್ಗಳಲ್ಲಿ 21 ರನ್ ನೀಡಿ 6 ವಿಕೆಟ್ ಉರುಳಿಸಿದರು. ಹಾರ್ದಿಕ್ ಪಾಂಡ್ಯ 2.3 ಓವರ್ಗಳಲ್ಲಿ 3 ರನ್ ನೀಡಿ 3 ವಿಕೆಟ್ ಪಡೆದರೆ ಜಸ್ಪೀತ್ ಬುಮ್ರಾ 5 ಓವರ್ನಲ್ಲ 23 ರನ್ ನೀಡಿ 1 ವಿಕೆಟ್ ಪಡೆದರು.

ಶ್ರೀಲಂಕಾ ಪರ ಕುಶಲ್ ಮೆಂಡಿಸ್ 17, ಹೇಮಂತ್ 13 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ ಮೊದಲ ಓವರ್ನಲ್ಲಿ ಮೊದಲ ವಿಕೆಟ್ ಪಡೆದರು.
ಸಿರಾಜ್ ತನ್ನ ಎರಡನೇ ಓವರ್ನಲ್ಲಿ 4 ವಿಕೆಟ್ ಉರುಳಿಸಿ ಶ್ರೀಲಂಕಾ ಪತನಕ್ಕೆ ಕಾರಣರಾದರು. ನಿಸ್ಸಾಂಕ, ಸಮರವಿಕ್ರಮ, ಅಸಲಂಕಾ ಮತ್ತು ಧನಂಜಯ ಅವರಿಗೆ ಸಿರಾಜ್ ಪೆವಿಲಿಯನ್ ದಾರಿ ತೋರಿಸಿದರು. ಸಿರಾಜ್ 6 ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ50 ವಿಕೆಟ್ ಪಡೆದ ಭಾರತದ 4ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2018ರಲ್ಲಿ ಭಾರತ ಏಷ್ಯಾ ಕಪ್ ಗೆದ್ದಿತು. ಆ ಬಳಿಕ ಏಷ್ಯಾಕಪ್, ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಗೆದ್ದಿರಲಿಲ್ಲ.