ಸುಳ್ಯ:ಬೆಳ್ಳಾರೆಯ ಝಕರಿಯಾ ಜುಮಾ ಮಸೀದಿಯ ಅಧೀನದಲ್ಲಿ ಬೆಳ್ಳಾರೆಯ ಹೃದಯ ಭಾಗದಲ್ಲಿ ಕಾರ್ಯಚರಿಸುತ್ತಿರುವ ಹಿದಾಯ ಪಬ್ಲಿಕ್ ಸ್ಕೂಲ್ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮೇ.24ರಂದು ಸಂಜೆ 4ಕ್ಕೆ ನಡೆಯಲಿದೆ ಎಂದು ಹಿದಾಯ ಪಬ್ಲಿಕ್ ಸ್ಕೂಲ್ನ ಆಡಳಿತ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಿದಾಯ ಪಬ್ಲಿಕ್ ಸ್ಕೂಲ್ನ
ಆಡಳಿತ ಮಂಡಳಿ ಕಾರ್ಯದರ್ಶಿ ಬಶೀರ್ ಯು.ಪಿ. ‘ಸಮಸ್ತ ಅಧ್ಯಕ್ಷರಾದ ಜಿಫ್ರಿ ಮುತ್ತುಕೋಯ ತಂಙಳ್ ಅವರು ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ದ.ಕ ಜಿಲ್ಲಾ ಖಾಝಿ ತ್ವಾಖಾ ಅಹಮ್ಮದ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಖಾಝಿ ಮಾಣಿ ಉಸ್ತಾದ್, ಸಯ್ಯದ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ, ಸಯ್ಯದ್ ಅಲಿ ತಂಙಳ್ ಕುಂಬೋಳ್, ಸಯ್ಯದ್ ಬರ್ಹಾನ್ ಅಲಿ ತಂಙಳ್ ಮಾಡನ್ನೂರ್ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ವಿಧಾನ ಸಭಾದ್ಯಕ್ಷರಾದ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವರಾದ ರಮಾನಾಥ ರೈ. ಲೋಕ ಸಭಾ ಸದಸ್ಯರಾದ ಕ್ಯಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ, ಅಶೋಕ್ಕುಮಾರ್ , ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಐವನ್ ಡಿಸೋಜ, ಮಾಜಿ ಸದಸ್ಯ ಹರೀಶ್ ಕುಮಾರ್, ರಾಜ್ಯ ವಕ್ಸ್ ಮಂಡಳಿ ಅಧ್ಯಕ್ಷ ಸೈಯ್ಯದ್ ಮೊಹಮ್ಮದ್ ಅಲಿ ಹುಸೈನಿ, ಹ್ಯೂಮನ್ ರೈಟ್ಸ್
ವ್ಯಸ್ ಚೇರ್ಮನ್ ಡಾ.ಅಕ್ರಂ ಪಾಷ ಸೇರಿದಂತೆ
ಹಲವು ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಝಕರಿಯಾ ಜುಮಾ ಮಸೀದಿಗೆ ನೂತನ ಆಡಳಿತ ಸಮಿತಿಯು ಅಧಿಕಾರಕ್ಕೆ ಬಂದು ಕೇವಲ ಒಂದು ವರ್ಷದಲ್ಲಿಯೇ ಸುಮಾರು 9,000 ಚದರ ಅಡಿ ವಿಸ್ತೀರ್ಣದ ಮೂರು ಅಂತಸ್ತಿನ ಒಟ್ಟು 27,000 ಚದರ ಅಡಿ ವಿಸ್ತೀರ್ಣದ ಬೃಹತ್ ಕಟ್ಟಡವು ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷರು, ಹಿದಾಯ ಪಬ್ಲಿಕ್ ಸ್ಕೂಲ್ ಅದ್ಯಕ್ಷರಾದ ಯು. ಹೆಚ್. ಅಬೂಬಕ್ಕರ್ ಹಾಜಿ ಮತ್ತು ಮಸೀದಿ ಉಪಾದ್ಯಕ್ಷರು, ಹಿದಾಯ ಪಬ್ಲಿಕ್ ಸ್ಕೂಲ್ ಸಂಚಾಲಕರಾದ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಯವರ ನೇತೃತ್ವದಲ್ಲಿ ಧಾನಿಗಳ ಸಹಾಯದಿಂದ, ಆಡಳಿತ ಸಮಿತಿ, ಶಾಲಾ ಆಡಳಿತ ಸಮಿತಿ, ಊರಿನ, ಹೊರ ಊರಿನ, ಅನಿವಾಸಿ ಧಾನಿಗಳ, ಜಮಾತಿನ ಸರ್ವ ಸಹಾಕಾರದೊಂದಿಗೆ ಕೇವಲ ಒಂದು ವರ್ಷದಲ್ಲಿ ಪೂರ್ತಿ ಮಾಡಲಾಗಿದೆ.
ಬೆಳ್ಳಾರೆ ಮಾತ್ರವಲ್ಲದೆ ಸುತ್ತಮುತ್ತಲಿನ ವಿದ್ಯಾರ್ಥಿಗಳ, ಪೋಷಕರ ಪ್ರೀತಿಗೆ ಪಾತ್ರವಾದ ಹಿದಾಯ ಪಬ್ಲಿಕ್ ಸ್ಕೂಲ್ನಲ್ಲಿ ಅತ್ಯತ್ತುಮ ಬೋಧಕರಾದ 17 ಅಧ್ಯಾಪಕಿಯರು, ಮದ್ರಸಾ ಉಸ್ತಾದರು ಮತ್ತು ಮಕ್ಕಳ ಸೇವಕಿಯರು ಮಕ್ಕಳ ಅಭಿವೃದ್ಧಿಗಾಗಿ ಸದಾ ಕ್ರಿಯಾಶೀಲರಾಗಿದ್ದಾರೆ.
ಒಂದೇ ಸೂರಿನಡಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ, ವಿಶಾಲವಾದ ಆಟದ ಮೈದಾನ, ಸುಸಜ್ಜಿತ ಕಂಪ್ಯೂಟರ್ ಕೊಠಡಿಗಳು, ಸ್ಮಾರ್ಟ್ ಕ್ಲಾಸ್ ರೂಮ್, ವಾಚನಾಲಯ ( ಲೈಬ್ರರಿ), ವಿಜ್ಞಾನ ಪ್ರಯೋಗಲಯ, ಪಠ್ಯೇತರ ಚುವಟಿಕೆಗಳಲ್ಲಿ ಭಾಗವಹಿಸಲು ಮಕ್ಕಳಿಗೆ ವಿಶೇಷ ತರಬೇತಿ ಮತ್ತು ಪ್ರೋತ್ಸಾಹ, ಪ್ರತ್ಯೇಕ ಮದರಸಾ ತರಗತಿಗಳು, ಕರಾಟೆ ತರಗತಿಗಳು, ಶಾಲಾ ವಾಹನ ವ್ಯವಸ್ಥೆ, ಸಂಸ್ಥೆಯ ಪಕ್ಕದಲ್ಲೆ ಬಸ್ ನಿಲ್ದಾಣ (ಸರ್ಕಾರಿ ಬಸ್ ಗಳಲ್ಲಿ ಬರುವವರಿಗೆ). ಸೇರಿದಂತೆ ಎಲ್ಲಾ ವ್ಯವಸ್ಥೆ ಗಳನ್ನು ಹೊಂದಿರುತ್ತದೆ, LKGಯಿಂದ 8 ನೇ ತರಗತಿ ವರೆಗೆ ಕಳೆದ ವರ್ಷ ಸುಮಾರು 240 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು, ಪ್ರಸ್ತುತ ವರ್ಷದಲ್ಲಿ 100 ರಷ್ಟು ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದು, ದಾಖಲಾತಿ ಮುಂದುವರಿಯುತ್ತಿದೆ ಎಂದು ಯು.ಪಿ.ಬಶೀರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷರು, ಹಿದಾಯ ಪಬ್ಲಿಕ್ ಸ್ಕೂಲ್ ಅದ್ಯಕ್ಷರಾದ ಯು. ಹೆಚ್. ಅಬೂಬಕ್ಕರ್ ಹಾಜಿ, ಮಸೀದಿ ಉಪಾದ್ಯಕ್ಷರು, ಹಿದಾಯ ಪಬ್ಲಿಕ್ ಸ್ಕೂಲ್ ಸಂಚಾಲಕರಾದ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಕೋಶಾಧಿಕಾರಿ ಝಕರಿಯಾ ಎನ್.ಎಂ, ಝಕಾರಿಯಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಬಶೀರ್ ಕಲ್ಲಪಣೆ, ಸದಸ್ಯರಾದ ಹಮೀದ್ ಎಚ್.ಎಂ, ಅಬರುದ್ದೀನ್ ಬೆಳ್ಳಾರೆ ಉಪಸ್ಥಿತರಿದ್ದರು.