ಸುಳ್ಯ: ಕೆಲವು ದಿನಗಳ ಬಿಡುವಿನ ಬಳಿಕ ಮತ್ತೆ ಉತ್ತಮ ಮಳೆಯಾಗುತಿದೆ. ಗುಡುಗು ಸಿಡಿಲಿನ ಅಬ್ಬರದೊಂದಿಗೆ ಸುಳ್ಯದಲ್ಲಿ ಭರ್ಜರಿ ಮಳೆಯಾಗುತಿದೆ. ಕಿಡಿಗಪ್ಪಳಿಸುವ ಗುಡುಗು ಹಾಗೂ ಸಿಡಿಲಿನ ಅಬ್ಬರ ಅಧಿಕವಾಗಿತ್ತು.ಸಂಜೆ 7 ಗಂಟೆಯ ಬಳಿಕ ಸುಳ್ಯದಲ್ಲಿ ಗುಡುಗು
ಸಿಡಿಲಿನ ಸ್ಪೋಟ ಆರಂಭವಾಗಿದೆ. ಬಳಿಕ ಉತ್ತಮ ಮಳೆಯಾಗಿದೆ. ಸಂಪಾಜೆ ಭಾಗದಲ್ಲಿಯೂ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಭಾರೀ ಮಳೆಯಾಗಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿದಿದೆ. ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿ ಬಿಸಿಲಿನ ವಾತಾವರಣ ಇತ್ತು. ಕೆಲವೊಮ್ಮೆ ಹನಿ ಮಳೆಯಷ್ಟೇ ಆಗಿತ್ತು.
ಈ ಮಧ್ಯೆ ಆ.14ರಿಂದ 20ರ ತನಕ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.