ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರ ಮೇಲೆ ದಾಖಲಾದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಇದೀಗ ಬೆಳ್ತಂಗಡಿ ವೃತ್ತನಿರೀಕ್ಷಕರ ನೇತೃತ್ವದ ಪೊಲೀಸರ ತಂಡ ಶಾಸಕರಿಗೆ ಎರಡು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿ ಹಿಂದಿರುಗಿದೆ. ಬಿಜೆಪಿ ಮುಖಂಡ ಶಶಿರಾಜ್ ಶೆಟ್ಟಿ ಬಂಧನಕ್ಕೆ ಸಂಬಂಧಿಸಿದಂತೆ
ಶಾಸಕ ಹರೀಶ್ ಪೂಂಜ ಪೊಲೀಸರ ನಡುವೆ ಉಂಟಾದ ಮಾತಿನ ಚಕಮಕಿ ಹಾಗೂ ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾದ ಎರಡು ಪ್ರಕರಣಗಳ ವಿಚಾರವಾಗಿ ತನಿಖಗೆ ಶಾಸಕರ ಮನೆಗೆ ಬಂದಿದ್ದ ಪೊಲೀಸರು ಶಾಸಕರನ್ನು ಬಂಧಿಸುತ್ತಾರೆ ಎಂಬ ವಾತಾರವರಣ ಸೃಷ್ಠಿಯಾಗಿತ್ತು.ಪೊಲೀಸರು ಹಾಗೂ ನ್ಯಾಯವಾದಿಗಳ ನಡುವೆ ದಿನಪೂರ್ತಿ ಮಾತುಕತೆ ನಡೆದಿತ್ತು. ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ವಿನ್ಯಾಸ ಮಾಡಲಾಗಿತ್ತು.ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಎಸ್.ಐ., ವೃತ್ತ ನಿರೀಕ್ಷಕರನ್ನು ನಿಯೋಜಿಸಲಾಗಿತ್ತು.ಗರ್ಡಾಡಿಯ ಶಾಸಕರ ಮನೆಯ ಸಮೀಪ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಇಡೀ ದಿನ ಹೈಡ್ರಾಮ ನಡೆದಿತ್ತು. ಬಳಿಕ ಸಂಜೆಯ ವೇಳೆಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಶಾಸಕರಿಗೆ ನೋಟೀಸ್ ನೀಡಿ ತೆರಳಿದರು.