ಸುಳ್ಯ: ಗೌಡರ ಯುವ ಸೇವಾ ಸಂಘದ ಗೌಡ ಸಮುದಾಯಭವನ ನಿರ್ವಹಣಾ ಸಮಿತಿ ಮತ್ತು ಮಹಿಳಾ ಘಟಕ, ತರುಣ ಘಟಕ, ನಗರ ಘಟಕ, ಗ್ರಾಮ ಸಮಿತಿಗಳ ವತಿಯಿಂದ ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರಪೂಜೆ ಮತ್ತು ವಧು ವರರ ಮನೆಯ ನವೀಕರಣಕ್ಕೆ ಚಾಲನೆ ಹಾಗೂ ಅಭಿನಂದನಾ ಕಾರ್ಯಕ್ರಮ ಸುಳ್ಯ ಕೊಡಿಯಾಲಬೈಲು ಗೌಡ ಸಮುದಾಯಭವನದಲ್ಲಿ ನಡೆಯಿತು.ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ. ಚಾಲನೆ ನೀಡಿ ಮಾತನಾಡಿ
ಗೌಡರ ಯುವ ಸೇವಾ ಸಂಘದ ವತಿಯಿಂದ ನಿರ್ಮಿಸಿದ ಗೌಡ ಸಮುದಾಯ ಭವನ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಎಕ್ಸಿಕ್ಯುಟಿವ್ ಕೌನ್ಸಿಲ್ ಮೆಂಬರ್ ಡಾ.ಉಜ್ವಲ್ ಯು.ಜೆ., ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಸಿ.ಸದಾನಂದ, ಸುಳ್ಯ ಕೊಡಿಯಾಲಬೈಲು ಎಂ.ಜಿ.ಎಂ. ವಿದ್ಯಾಸಂಸ್ಥೆಯ

ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು ಭಾಗವಹಿಸಿದ್ದರು.
ಗೌಡ ಸಮುದಾಯಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಎ.ವಿ. ತೀರ್ಥರಾಮ, ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ಕೋಶಾಧಿಕಾರಿ ದಿನೇಶ್ ಮಡ್ತಿಲ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು, ಕಾರ್ಯದರ್ಶಿ ಶ್ರೀಮತಿ ಸವಿತಾ ಸಂದೇಶ್, ತರುಣ ಘಟಕ ಅಧ್ಯಕ್ಷ ಪ್ರೀತಂ ಡಿ.ಕೆ., ಕಾರ್ಯದರ್ಶಿ ಸನತ್ ಪೆಲ್ತಡ್ಕ, ನಗರ ಗೌಡ ಘಟಕ ಅಧ್ಯಕ್ಷ ರಾಕೇಶ್ ಕುಂಟಿಕಾನ, ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ, ನಗರ ಮಹಿಳಾ ಘಟಕದ ಅಧ್ಯಕ್ಷೆ ಹರ್ಷ ಕರುಣಾಕರ, ಕಾರ್ಯದರ್ಶಿ ಸುಜಾತ ಕುರುಂಜಿ ಇದ್ದರು.
ಕಾರ್ಯಕ್ರಮ ನಿರ್ದೇಶಕ ತಿಮ್ಕಯ್ಯ ಪಿಂಡಿಮನೆ ಸ್ವಾಗತಿಸಿದರು. ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.ಬೆಳಗ್ಗೆ ಪುರೋಹಿತ ನಟರಾಜ ಶರ್ಮರ ಪೌರೋಹಿತ್ಯದಲ್ಲಿ ಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜೆ ನಡೆಯಿತು. ಹಾಗೂ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ ಸುಳ್ಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ
ವಿವಿಧ ಕ್ಷೇತ್ರಗಳ ಅಧ್ಯಕ್ಷರಾಗಿ, ಸದಸ್ಯರಾಗಿ, ದೇವಸ್ಥಾನದಗಳ ವ್ಯವಸ್ಥಾಪನಾ ಸಮಿತಿಗೆ ಆಯ್ಕೆಯಾದ ಗೌಡ ಸಮಾಜದ ವರನ್ನು ಗೌರವಿಸಲಾಯಿತು.