ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ನಲ್ಲಿ ದಸರಾ ಪ್ರಯುಕ್ತ ಗೊಂಬೆ ಉತ್ಸವವನ್ನು ಏರ್ಪಡಿಸಲಾಗಿತ್ತು. ಪತ್ರಕರ್ತ ದುರ್ಗಾ ಕುಮಾರ್ ನಾಯರ್ ಕೆರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ
ಡಾ.ಸಾಯಿಗೀತಾ ಜ್ಞಾನೇಶ್ ಭಾಗವಹಿಸಿದ್ದರು. ಶಾಲಾ ಸಂಚಾಲಕಿ ಆದ ಗೀತಾಂಜಲಿ ಟಿ.ಜಿ ಅವರು ಗೊಂಬೆ ಹಬ್ಬದ ವಿಶೇಷ ಮತ್ತು ಮಹತ್ವದ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷ ಶುಭಕರ ಬಿ. ಸಿ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಪೋಷಕ ಪ್ರತಿನಿಧಿ ಶುಶಾನ್ ಸ್ವಾಗತಿಸಿದರು. ಕಾರ್ಯಕ್ರಮದ ನಂತರ ರಂಗೋಲಿ ಹಾಗೂ ವೆಜಿಟೇಬಲ್ ಕಾರ್ವಿಂಗ್ ಸ್ಪರ್ಧೆಯನ್ನು ಪೋಷಕರಿಗೆ ಆಯೋಜಿಸಲಾಗಿತ್ತು. ಸಂಸ್ಥೆಯ ಪೋಷಕರಾದ ಪ್ರಮೀಳಾ ಪ್ರಾರ್ಥಿಸಿದರು.ರಕ್ಷಿತಾ ವಂದಿಸಿದರು.ಶಿಕ್ಷಕಿ ನಿರ್ಮಲ ಕಾರ್ಯಕ್ರಮ ನಿರೂಪಿಸಿದರು.











