ಸುಳ್ಯ: ಕೇರಳದ ಬೇಕಲ್ ಗೋಕುಲಮ್ ಗೋಶಾಲ ಪರಂಪರ ವಿದ್ಯಾ ಪೀಠದ ಆಶ್ರಯದಲ್ಲಿ ನಡೆದ ವೈಶಾಖ ನೃತ್ಯೋತ್ಸವದಲ್ಲಿ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಕಲಾವಿದರು ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದರು. ಮೇ 1ರಿಂದ 14ರ ತನಕ 14 ದಿನಗಳ ನಡೆದ ವೈಶಾಖ ನೃತ್ಯೋತ್ಸವದಲ್ಲಿ
ಗುರುದೇವ್ ಅಕಾಡೆಮಿಯ ನಿರ್ದೇಶಕರಾದ ಡಾ. ಚೇತನ ರಾಧಾಕೃಷ್ಣ ಪಿ.ಎಂ. ಅವರ ನೇತೃತ್ವದಲ್ಲಿ ಅಕಾಡೆಮಿಯ ಕಲಾವಿದರು ಎರಡು ದಿನಗಳಲ್ಲಿ ಭರತನಾಟ್ಯ ಪ್ರದರ್ಶಿಸಿದರು. ಮೇ.7 ರಂದು ಗುರುದೇವ್ ಅಕಾಡೆಮಿಯ ಕಲಾವಿದೆ ಶಮಿತಾ ಕೆ ನೃತ್ಯ ಪ್ರದರ್ಶನ ನೀಡಿದರು.ಮೇ.11 ರಂದು ಸಂಜೆ ಗೋಕುಲಮ್ ಗೋಶಾಲೆಯ ನಂದಿ ಮಂಟಪದಲ್ಲಿ

ಗುರುದೇವ್ ಅಕಾಡೆಮಿಯ ನಿರ್ದೇಶಕರಾದ ಡಾ. ಚೇತನ ರಾಧಾಕೃಷ್ಣ ಪಿ.ಎಂ ಹಾಗೂ ತಂಡದವರು ಭಗವದ್ಗೀತೆ ಆಧಾರಿತ ಗೀತ ಪಂಚಾಮೃತ, ನರ್ತನ ಪದಂ ಹಾಗೂ ದೇವರ ನಾಮಗಳ ಪ್ರಸ್ತುತಿ ಮಾಡಿದರು.ಮುಂದುವರಿದು ಅದೇ ವೇದಿಕೆಯಲ್ಲಿ ಗುರುದೇವ ಅಕಾಡೆಮಿಯ ಕಿರಿಯ ಕಲಾವಿದೆ ಐನಾ ಸೋಮಯ್ಯ ಎಂ ಗಣೇಶ ಕೃತಿ, ಕೃಷ್ಣ ಕೌತುವಂ, ಆದಿನಾಗನ ಪದವರ್ಣ ಮತ್ತು ಶಂಕರ ಶ್ರೀ ಗಿರಿ ಕೃತಿಯನ್ನು ಪ್ರಸ್ತುತಪಡಿಸಿದರು. ಗುರುದೇವ ಅಕಾಡೆಮಿಯ ಹಿರಿಯ ಕಲಾವಿದೆ ವಿದುಷಿ ಮಹಿಮಾ ಭಟ್ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.















