ಸುಳ್ಯ:ಅಮರ ಸುಳ್ಯ -1837 ಮೆಮೋರಿಯಲ್ ಟ್ರಸ್ಟ್ ವತಿಯಿಂದ ಅಮರ ಸುಳ್ಯ -1837 ಚಲನಚಿತ್ರ ನಿರ್ಮಾಣ ಮಾಡಲಾಗುವುದು ಎಂದು ಟ್ರಸ್ಟ್ನ ಕಾರ್ಯದರ್ಶಿ ಎ.ಕೆ.ಹಿಮಕರ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಐತಿಹಾಸಿಕ ಘಟನೆಯನ್ನು ಹಲವರು ಹಲವು ರೀತಿಯಲ್ಲಿ ಚಿತ್ರಿಸಿದ್ದಾರೆ. ಹೀಗಿದ್ದರೂ ಚರಿತ್ರೆಯ ನೈಜ ಚಿತ್ರವು ಇನ್ನೂ ಮಸುಕಾಗಿಯೇ ಇದೆ. ಹಾಗಾಗಿ, ಈ ಬಗ್ಗೆ
ಆಸಕ್ತ ಸ್ನೇಹಿತರು ಒಂದಾಗಿ ‘ಆರ್ಟಿಸ್ಟ್ಸ್ ಯುನೈಟೆಡ್’ ಎಂಬ ಬ್ಯಾನರ್ನ ಅಡಿಯಲ್ಲಿ ‘ಅಮರ ಸುಳ್ಯ-1837’ ಎಂಬ ಪೂರ್ಣ ಪ್ರಮಾಣದ ಚಲನಚಿತ್ರವನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಅಮರ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ ಕೊಡಗು ಮತ್ತು ಸಮಗ್ರ ತುಳುನಾಡಿನ ಸ್ವಾತಂತ್ರ್ಯ ಯೋಧರು ಸಂಘಟಿತರಾಗಿ ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಸೆಣಸಾಡಿ ಜಯಶಾಲಿಯಾಗಿ ಸ್ವಾತಂತ್ರ ಸರಕಾರವೊಂದನ್ನು ಮುನ್ನಡೆಸಿದರು.13 ದಿನಗಳ ಸರಕಾರವಾದರೂ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮೊತ್ತ ಮೊದಲ

ಗೆಲುವಾಗಿದೆ. ಬ್ರಿಟಿಷ್ ವಸಾಹತುಶಾಹಿ ನೀತಿಯನ್ನು ಆಧುನಿಕ ನವ ವಸಾಹುತುಶಾಹಿಯೊಂದಿಗೆ ತುಲನಾತ್ಮಕವಾದ ಮತ್ತು ಕಲಾತ್ಮಕ ಈ ಚಲನಚಿತ್ರವು ಸಮಕಾಲೀನ ಪ್ರತಿಫಲನವನ್ನು ಚಿತ್ರದಲ್ಲಿ ಕಾಣಬಹುದು ಚಿತ್ರದಲ್ಲಿ ನೈಜ ಇತಿಹಾಸದ ಜೊತೆಗೆ ಕಲಾತ್ಮಕ. ಸೈದ್ಧಾಂತಿಕ ಚಿಂತನೆಯೂ ಇದೆ. ಹಾಗೆಯೇ ಸೃಜನಶೀಲತೆ, ಹಾಸ್ಯ, ಮನರಂಜನೆಯೂ ಇರುತ್ತದೆ. ನಮ್ಮದೇ ಚರಿತ್ರೆಯನ್ನು ಮುಂದಿನ ತಲೆಮಾರಿಗೆ ತಿಳಿಸುವ ಗುರಿಯನ್ನು ಹೊಂದಿದೆ.
ಟ್ರಸ್ಟ್ನಲ್ಲಿ ಕೆ.ಆರ್.ತೇಜಕುಮಾರ್ (ಮೇನೇಜಿಂಗ್ ಟ್ರಸ್ಟಿ), ಎ.ಕೆ.ಹಿಮಕರ ಕಾರ್ಯದರ್ಶಿಯಾಗಿ ಬೇಕಲ್ ರಾಮನಾಥ, ಖಜಾಂಜಿಯಾಗಿ ಮತ್ತು ಡಾ.ಕೆ.ಆರ್.ವಿದ್ಯಾಧರ ಮತ್ತು ಬೆಂಗಳೂರಿನ ಜಾನ್ ದೇವರಾಜ್ ಸದಸ್ಯರಾಗಿದ್ದಾರೆ. ಜಾನ್ ದೇವರಾಜ್ ಅಮರ ಸುಳ್ಯ-1837 ಚಿತ್ರದ ನಿರ್ದೇಶನ ಮಾಡಲಿದ್ದಾರೆ. ಸಂಶೋಧಕ ಡಾ.ವಿದ್ಯಾಧರ ಕುಡೆಕಲ್ಲು ಅವರು ಬರೆದ ಕೃತಿಗೆ ಎ.ಕೆ. ಹಿಮಕರ ಚಿತ್ರಕತೆ ಬರೆದಿದ್ದಾರೆ. 2026ರ ಪ್ರಾಂತ್ಯಕ್ಕೆ ಚಲನಚಿತ್ರವು ಪ್ರದರ್ಶನಕ್ಕೆ ಸಿದ್ಧಪಡಿಸಲಾಗುವುದು ಎಂದರು.
ನಿರ್ದೇಶಕ ಜಾನ್ ದೇವರಾಜ್ ಮಾತನಾಡಿ ಆಗಿನ ಕಾಲ ಘಟ್ಟಕ್ಕೆ ಸರಿಯಾಗಿ ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ಸಿನಿಮಾ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಮೇನೇಜಿಂಗ್ ಟ್ರಸ್ಟಿ ತೇಜಕುಮಾರ್ ಬಡ್ಡಡ್ಕ, ವಿದ್ಯಾಧರ ಬಡ್ಡಡ್ಕ, ಮಿಥುನ್ ಕುಮಾರ್ ಸೋನ ಉಪಸ್ಥಿತರಿದ್ದರು.














