ಹಳೆಗೇಟು:ಸುಳ್ಯ ಹಳೆಗೇಟು ಸಾಂಸ್ಕೃತಿಕ ಸಂಘದ ವತಿಯಿಂದ ನಡೆಯುವ 43ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಳೆಗೇಟಿನ ವಸಂತಕಟ್ಟೆಯಲ್ಲಿ ನಡೆಯಿತು. ಭಾರತ್ ಪೆಟ್ರೋಲಿಯಂ ನ ನಿವೃತ್ತ ಜನರಲ್ ಮ್ಯಾನೇಜರ್ ಶಿವಪ್ರಸಾದ್ ಕಜೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.ಸೆ.14ರಿಂದ
ಮೂರು ದಿನಗಳ ಕಾಲ ನಡೆಯಲಿರುವ ಗಣೇಶೋತ್ಸವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು,ಸೆಪ್ಟೆಂಬರ್ 16ರಂದು ಸಾರ್ವಜನಿಕ ಮಹಾ ಅನ್ನ ಸಂತರ್ಪಣೆ ಮತ್ತು ಭವ್ಯ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಳ್ಳಲಿದೆ.ಅಧ್ಯಕ್ಷರಾದ ಬಾಲಗೋಪಾಲ ಸೇರ್ಕಜೆ ಸ್ವಾಗತಿಸಿ, ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ್ ರಾವ್ ವಂದಿಸಿದರು.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶಿವನಾಥ್ ರಾವ್, ರಾಕೇಶ್ ಕುಂಟಿಕಾನ, ಗಣೇಶ್ ಕೊಯಿಂಗೋಡಿ, ಜ್ಞಾನೇಶ್ವರ ಶೇಟ್, ಖಜಾಂಜಿ ಚಿತ್ತರಂಜನ್ ಹಳೆಗೇಟು, ರಾಧಾಕೃಷ್ಣ ರಾವ್, ಶಿವಾಜಿ ಯುವ ವೃಂದದ ಅಧ್ಯಕ್ಷರಾದ ಸಚಿನ್ ರಾವ್, ಗೌತಮ್ ಭಟ್,ರಾಜೇಶ್ ಕುಮಾರ್,ಜೀವನ್ ಮತ್ತಿತರರು ಉಪಸ್ಥಿತರಿದ್ದರು.








































