ಎಲಿಮಲೆ:ವಿಶ್ವ ಹಿಂದೂ ಪರಿಷದ್, ಭಜರಂಗದಳ, ಮಾತೃ ಶಕ್ತಿ ದುರ್ಗವಾಹಿನಿ ಅಯೋದ್ಯೆ ಘಟಕ ಎಲಿಮಲೆ ಇದರ ಆಶ್ರಯದಲ್ಲಿ ಎಲಿಮಲೆಯಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ಆ.13 ರಂದು ರಾತ್ರಿ ನಡೆಯಿತು. ಮೆರವಣಿಗೆಗೆ ಹಿರಿಯರಾದ ಅಡಿಗೈ ತ್ಯಾoಪ್ಪಣ್ಣ ಗೌಡ ಚಾಲನೆ ನೀಡಿದರು. ಎಲಿಮಲೆ ಮೇಲಿನ
ಪೇಟೆಯಿಂದ ಕೇಳಿಗಿಪೇಟೆವರೆಗೆ ಸಾಗಿ ಮೇಲಿನ ಪೇಟೆಯಲ್ಲಿ ಸಮಪಾನಗೊಂಡಿತ್ತು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೋಜಪ್ಪ ಗೌಡ ಹರ್ಲಡ್ಕ ವಹಿಸಿದ್ದರು. ಉಪನ್ಯಾಸಕರಾದ ಡಾ. ರವೀಶ್ ಪಡುಮಲೆ ಮುಖ್ಯ ಭಾಷಣ ಮಾಡಿದರು. ತಾಲೂಕು ವಿಶ್ವ ಹಿಂದೂ ಪರಿಷದ್ ಸಂಯೋಜಕ ಹರಿಪ್ರಸಾದ್ ಎಲಿಮಲೆ, ತಾಲೂಕು

ಕಾರ್ಯದರ್ಶಿ ನವೀನ್ ಎಲಿಮಲೆ, ಜಿಲ್ಲಾ ಸಪ್ತಾಹಿಕ ಪ್ರಮುಖ್ ರೂಪೇಶ್ ಪೂಜಾರಿಮನೆ, ತ್ಯಾಂಪಣ್ಣ ಅಡಿಗೈ,ವಿಶ್ವ ಹಿಂದೂ ಪರಿಷದ್ ಅಯೋದ್ಯೆ ಘಟಕದ ಕಾರ್ಯದರ್ಶಿ ಸುನಿಲ್ ಸುಳ್ಳಿ ಹಾಗೂ ದುರ್ಗಾ ವಾಹಿನಿಯ ಜಯಂತಿ ಎಲಿಮಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ. ಪ್ರಮುಖರಾದ ತೀರ್ಥರಾಮ ಅಂಬೆಕಲ್ಲು, ವಿಷ್ಣು ಭಟ್ ಕೃಷ್ಣಯ್ಯ ಮೂಲೆತೋಟ, ಹರೀಶ್ ಕಂಜಿಪಿಲಿ, ಪ್ರವೀಣ್ ರಾವ್ ದೊಡ್ಡತೋಟ ಮತ್ತಿತರರು ಉಪಸ್ಥಿತರಿದ್ದರು. ಚಿನ್ಮಯ ಕೇರ ಹಾಗೂ ಪ್ರಜ್ಞಾ ಗುಡ್ಡನಮನೆ ವಂದೇ ಮಾತರಂ ಹಾಡಿದರು. ಹರಿಪ್ರಸಾದ್ ಬಿ. ವಿ. ಸ್ವಾಗತಿಸಿ, ಕುಲದೀಪ್ ಹಾರ್ಲಡ್ಕ ವಂದಿಸಿದರು. ಉದಯಕುಮಾರ್ ಚಳ್ಳ ಕಾರ್ಯಕ್ರಮ ನಿರೂಪಿಸಿದರು.





































