ಸುಳ್ಯ:ಸುಳ್ಯ ತಾಲೂಕಿ ಮಾಜಿ ಸೈನಿಕರ ಸಂಘದ ವತಿಯಿಂದ ಸುಳ್ಯದ ಪಶು ಸಂಗೋಪನಾ ಇಲಾಖೆಯ ಸುಳ್ಯ ತಾಲೂಕು ಆಸ್ಪತ್ರೆಗೆ ಎಲೆಕ್ಟ್ರಿಕ್ ಆಟೋಕ್ಲೇವ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಪಶುಸಂಗೋಪನಾ ಇಲಾಖೆಯ
ಸಹಾಯಕ ನಿರ್ದೇಶಕರಾದ ನಿತಿನ್ ಪ್ರಭು ಕೆ ಇವರಿಗೆ ಹಸ್ತಾಂತರಿಸಿದರು. ಈ ಉಪಕರಣವನ್ನು ದಿನನಿತ್ಯ ನಡೆಯುವ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಶುದ್ಧೀಕರಣ ಮತ್ತು ನಂಜು ಮುಕ್ತಗೊಳಿಸುವುದಕ್ಕಾಗಿ ಬಳಸಲಾಗುತ್ತದೆ. ಕಳೆದ ಸಾಲಿನಲ್ಲಿ ಮಾಜಿ ಸೈನಿಕರ ಸಂಘವು ಪಶು ಆಸ್ಪತ್ರೆಗೆ ಎಲೆಕ್ಟ್ರಾನಿಕ್ ಓಟೋಸ್ಕೋಪ್ ಕೊಡುಗೆಯಾಗಿ ನೀಡಿತ್ತು ಇದರಿಂದ ಬಹಳಷ್ಟು ಪ್ರಾಣಿಗಳ ಕಿವಿಯ ಚಿಕಿತ್ಸೆ ಮಾಡುವಲ್ಲಿ ಸಹಕಾರಿಯಾಗಿತ್ತು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.