ಚೆನ್ನೈ: ವೇಗಿಗಳಾದ ಮೊಹಮ್ಮದ್ ಶಮಿ ಹಾಗು ಮುಕೇಶ್ ಕುಮಾರ್ ದಾಳಿಗೆ ದಕ್ಷಿಣ ವಲಯ ತಂಡದ ಬ್ಯಾಟಿಂಗ್ ವಿಭಾಗವು ತತ್ತರಿಸಿದೆ. ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪೂರ್ವ ವಲಯವು ಇನಿಂಗ್ಸ್ ಮುನ್ನಡೆಯ ಸನಿಹಕ್ಕೆ ಬಂದು ನಿಂತಿತು.ಮೊದಲು ಬ್ಯಾಟಿಂಗ್ ಮಾಡಿದ್ದ ಪೂರ್ವವಲಯವು ಮೊದಲ ಇನಿಂಗ್ಸ್ನಲ್ಲಿ
708 ರನ್ ಬೃಹತ್ ಮೊತ್ತಕ್ಕೆ ಉತ್ತರವಾಗಿ ದಕ್ಷಿಣ ವಲಯವು 6 ವಿಕೆಟ್ಗಳಿಗೆ 242 ರನ್ ಗಳಿಸಿದೆ. ಪ್ರಥಮ ಇನಿಂಗ್ಸ್ ಮುನ್ನಡೆ ಗಳಿಸಲು ಇನ್ನೂ 466 ರನ್ ಗಳಿಸಬೇಕಿದೆ. ನಾಯಕ ತಿಲಕ್ ವರ್ಮಾ (56; 133ಎ) ಮತ್ತು ಸಿ.ವಿ. ಮಿಲಿಂದ್ ಕ್ರೀಸ್ನಲ್ಲಿದ್ದಾರೆ.
ದೇವದತ್ತ ಪಡಿಕ್ಕಲ್ (62 ರನ್) ಅವರು ಅರ್ಧ ಶತಕ ಗಳಿಸಿದರು.
ಸಂಕ್ಷಿಪ್ತ ಸ್ಕೋರು: ಪೂರ್ವ ವಲಯ: 163 ಓವರ್ಗಳಲ್ಲಿ 708. ದಕ್ಷಿಣ ವಲಯ: 80 ಓವರ್ಗಳಲ್ಲಿ 6ಕ್ಕೆ242 (ಎನ್. ಜಗದೀಶನ್ 32, ದೇವದತ್ತ ಪಡಿಕ್ಕಲ್ 62, ಶೇಖ್ ರಶೀದ್ 27, ತಿಲಕ್ ವರ್ಮಾ ಬ್ಯಾಟಿಂಗ್ 56, ಆರ್. ಸ್ಮರಣ್ 23, ಶ್ರೇಯಸ್ ಗೋಪಾಲ್ 26, ಮೊಹಮ್ಮದ್ ಶಮಿ 17ಕ್ಕೆ2, ಮುಕೇಶ್ ಕುಮಾರ್ 36ಕ್ಕೆ2).









