ಸುಳ್ಯ: ತುಳು ಚಿತ್ರೋದ್ಯಮದಲ್ಲಿ ಸ್ಥಳೀಯ ಕಲಾವಿದರ ಕೂಡುವಿಕೆಯಲ್ಲಿ ಮೂಡಿಬಂದ ತುಳು ಸಿನಿಮಾ ‘ಧರ್ಮ ಚಾವಡಿ’ ಬಗ್ಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಚಿತ್ರ ತಂಡ ಹೇಳಿದೆ.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಚಿತ್ರದ ಸಹ ನಿರ್ದೇಶಕ ಕೀರ್ತನ್ ಶೆಟ್ಟಿ ಸುಳ್ಯ ‘ಈ ಸಿನಿಮಾವು ಸ್ಥಳೀಯ
ಪರಿಚಿತ ಕಲಾವಿದರು ಮತ್ತು ಹೊಸ ಮುಖಗಳ ಜೊತೆಗೆ ವಿಭಿನ್ನವಾದ ಒಂದು ಸಂಸ್ಕೃತಿ ಹಾಗೂ ಭಾವೈಕ್ಯತೆ ಮೂಡಿಸುವ ಸಿನಿಮವಾಗಿದೆ. ಜಗದೀಶ್ ಆಮೀನ್ ನಡುಬೈಲು ನಿರ್ಮಾಣದಲ್ಲಿ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ ಧರ್ಮ ಚಾವಡಿ ಸಿನಿಮಾ ಜುಲೈ 11ರಂದು ತೆರೆ ಕಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತಿದೆ. ಎಲ್ಲಾ ವಯಸ್ಸಿನವರು ಕುಳಿತು ನೋಡುವ ಕೌಟುಂಬಿಕ ಹಿನ್ನಲೆಯ ಸಿನಿಮವಾಗಿದ್ದು ಇದೀಗ ಮಂಗಳೂರು , ಪುತ್ತೂರು , ಮುಳ್ಳೆರಿಯಾ , ಉಡುಪಿ ಸೇರಿದಂತೆ ನಾನಾ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುಳ್ಯದ ಜನರು ಈ ಸಿನಿಮಾವನ್ನು ವೀಕ್ಷಿಸಿ ಬೆಂಬಲಿಸುವಂತೆ ಅವರು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದಲ್ಲಿ ಕಲಾವಿದರಾಗಿ ಪಾತ್ರ ನಿರ್ವಹಿಸಿದ ದಯಾಕರ ಆಳ್ವ ಕುಂಬ್ರ ,ಬಾಲಕೃಷ್ಣ ರೈ , ಶುಭಾಶ್ಚಂದ್ರ ತೋಟ, ಸಿನಿಮಾದ ನೃತ್ಯ ನಿರ್ದೇಶಕರಾದ ಮಂಜು ಮಾಸ್ಟರ್ ಸುಳ್ಯ ಹಾಗೂ ಕಿಶೋರ್ ಅಡ್ಕಾರ್ ಉಪಸ್ಥಿತರಿದ್ದರು.














