ಸುಳ್ಯ:ಕೆವಿಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗೆ ಎಲ್ಲಾ ಸೋಮವಾರ ಪಾಣತ್ತೂರಿನಿಂದ ಸುಳ್ಯಕ್ಕೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಜುಲೈ 22 ರಂದು ಬಸ್ ಸಂಚಾರ ಪ್ರಾರಂಭಗೊಳ್ಳಲಿದೆ.
ಆಸ್ಪತ್ರೆಯಲ್ಲಿ ಹಲ್ಲುಗಳ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ
ಅಗತ್ಯ ಚಿಕಿತ್ಸೆಯನ್ನು ಕನಿಷ್ಠ ಶುಲ್ಕದೊಂದಿಗೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಅನುಕೂಲವಾಗುವಂತೆ ಆಸ್ಪತ್ರೆ ವತಿಯಿಂದ ಎಲ್ಲಾ ಸೋಮವಾರಗಳಂದು ಉಚಿತವಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪಾಣತ್ತೂರು ಮಣವಾಟಿ ಟೆಕ್ಸ್ಟೈಲ್ಸ್ ಬೆಳಿಗ್ಗೆ 8-30 ಗಂಟೆಗೆ) ಸಂಜೆ 3-30ಗಂಟೆಗೆ ವಾಪಾಸು ಬಿಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.