ಸುಳ್ಯ:ಸುಳ್ಯ ದಸರಾ ಉತ್ಸವದ ಪೂರ್ವಭಾವಿಯಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಶರದಾಂಬಾ ಮಹಿಳಾ ಸಮಿತಿಯ ಸಭೆ ಇಂದು ಬೂಡು ಶ್ರೀ ಭಗವತಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಮಹಿಳಾ ಸಮಿತಿಯ ಅಧ್ಯಕ್ಷೆ ಶಶಿಕಲಾ ನೀರಬಿದಿರೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಗೆ ಮಹಿಳಾ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಮುಂದಿನ
ಭಾನುವಾರ ನಡೆಯಲಿರುವ ಕ್ರೀಡಾ ದಸರಾದ ಅಂಗವಾಗಿ ನಡೆಯುವ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮಹಿಳಾ ಸಮಿತಿ ತೊಡಗಿಸಿಕೊಳ್ಳುವುದು ಮತ್ತು ಮುಂದಿನ ದಸರಾ ಕಾರ್ಯಕ್ರಮದಲ್ಲಿ ಒಂದು ದಿನ ಮಹಿಳಾ ದಸರಾ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮತ್ತು 9 ದಿನಗಳ ವಿಜೃಂಭಣೆಯ ದಸರಾ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡುವ ಬಗ್ಗೆ ಚರ್ಚಿಸಲಾಯಿತು.
ಶರದಾಂಬಾ ಸೇವಾ ಸಮಿತಿಯ ಉಪಾಧ್ಯಕ್ಷೆ ಯಶೋದಾ ರಾಮಚಂದ್ರ ಮಾತನಾಡಿದರು. ಶರದಾಂಬಾ ಉತ್ಸವ ಸಮಿತಿಯ ಗೌರವಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಖಜಾಂಜಿ ಗಣೇಶ್ ಆಳ್ವ, ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌರವಾಧ್ಯಕ್ಷ ಗೋಕುಲ್ದಾಸ್ ,ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರದಾಂಬಾ ಸಮೂಹ ಸಮಿತಿಯ ಪದಾಧಿಕಾರಿಗಳು, ಮಹಿಳಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.ಶಾರದಾಂಬಾ ಟ್ರಸ್ಟ್ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿ ಶಾರದಾಂಬಾ ಸೇವಾ ಸಮಿತಿಯ ಉಪಾಧ್ಯಕ್ಷೆ ಲತಾ ಮಧುಸೂಧನ್ ವಂದಿಸಿದರು.