ದೇವಚಳ್ಳ: ದೇವಚಳ್ಳ ಗ್ರಾಮದ ಕೇರ- ಅಂಬೆಕಲ್ಲು ಕಾಂಕ್ರೀಟ್ ರಸ್ತೆ ಉದ್ಘಾಟನೆ ನಡೆಯಿತು. ಅಂಬೆಕಲ್ಲು ಹೂವಪ್ಪ ಗೌಡ ಹಾಗೂ ವೆಂಕಟ್ರಮಣ ಗೌಡ ಅವರು ಜಂಟಿಯಾಗಿ ರಿಬ್ಬನ್ ಕತ್ತರಿಸಿ
ಉದ್ಘಾಟನೆ ನೆರವೇರಿಸಿದರು. ಕೃಷ್ಣಕುಮಾರ್ ದಂಪತಿಗಳು ದೀಪ ಬೆಳಗಿಸಿದರು. ಹುಕ್ರ ತೆಗಿನಕಾಯಿ ಒಡೆದರು. ವಿಶೇಷ ಅನುದಾನದಲ್ಲಿ ನಡೆದ ಕಾಮಗಾರಿ ಉದ್ಘಾಟನೆ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ನಾಗೇಶ್ ಅಂಬೆಕಲ್ಲು, ಹರ್ಷಿತ್ ಅಂಬೆಕಲ್ಲು, ದೀಕ್ಷಿತ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು