ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದ ನಿಯೋಗ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಅವರನ್ನು ನಿವಾಸದ ಕಛೇರಿಯಲ್ಲಿ ಭೇಟಿಯಾಗಿ ಸುಳ್ಯ ದಸರಾಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮತ್ತು
ಸಚಿವರಿಗೆ ದಸರಾದ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಬರುಂತೆ ಮನವಿಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವರು ಅನುದಾನ ಕುರಿತ ಕಡತಗಳನ್ನು ಪರಿಶೀಲಿಸಿ ಬಿಡುಗಡೆ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಸುಳ್ಯದ ಪ್ರಮುಖರಾದ ಹರೀಶ ಕಂಜಿಪಿಲಿ,ಸಂತೋಷ್ ಕುತ್ತಮೊಟ್ಟೆ,ದಯಾನಂದ ಕುರುಂಜಿ,ಕೇಶವ ಆಡ್ತಲೆ ಉಪಸ್ಥಿತರಿದ್ದರು.