ಬೆಳ್ಳಾರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಬೆಳ್ಳಾರೆ ವಲಯದ ಬೆಳ್ಳಾರೆ ಹಿಂದೂ ರುದ್ರ ಭೂಮಿ ಗೆ 1, 51,680/ ರೂ ಮೌಲ್ಯ ದ ಸಿಲಿಕಾನ್ ಚೆಂಬರ್ನ ಮಂಜೂರಾತಿ ಪತ್ರ ವನ್ನು ಸುಳ್ಯ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ ಅವರು ಬೆಳ್ಳಾರೆ ಗ್ರಾಮವಪಂಚಾಯತ್ ಅಧ್ಯಕ್ಷೆ ನಮಿತಾ ಹಾಗೂ
ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಹಸ್ತತರಿಸಿದರು. ಈ ಸಂದರ್ಭದಲ್ಲಿ ಮಾಜಿ ಪಂಚಾಯತ್ ಅಧ್ಯಕ್ಷರು ಚಂದ್ರಶೇಖರ್ ಪನ್ನೆ, ವಲಯ ಅಧ್ಯಕ್ಷರಾದ ವೇಧಾ.ಯಲ್. ಯಚ್ ಶೆಟ್ಟಿ ಒಕ್ಕೂಟದ ಅಧ್ಯಕ್ಷೆ ವಾರಿಜ, ಮಾಜಿ ಒಕ್ಕೂಟದ ಅಧ್ಯಕ್ಷೆ ಹರಿಣಾಕ್ಷಿ, ವಲಯ ಮೇಲ್ವಿಚಾರಕಿ ವಿಶಾಲ, ಕೆ ಗ್ರಾಮದ ಸೇವಾಪ್ರತಿನಿಧಿ ಹರೀನಾಕ್ಷಿ, ಒಕ್ಕೂಟದ ಜೊತೆ ಕಾರ್ಯದರ್ಶಿ ವೀಣಾ,ಪಂಚಾಯತ್ ಸದಸ್ಯರು ಜಯಶ್ರೀ. ಪಂಚಾಯತ್ ಸಿಬ್ಬಂದಿಗಳಾದ ಹೊನ್ನಪ್ಪ, ಹರೀಶ್, ತಿರುಮಲಶ್ವರ ಉಪಸ್ಥಿತರಿದ್ದರು.