ಸುಳ್ಯ:ಕೃಷಿ ಪ್ರಧಾನ ದೇಶವಾದ ಭಾರತದ ಬೆನ್ನೆಲುಬು ರೈತ, ರೈತರ ಬೆನ್ನೆಲುಬು ಸಹಕಾರ ಸಂಘಗಳು.ಸಹಕಾರ ಸಂಘಗಳು ಈ ದೇಶದ ರೈತರಿಗೆ ಆರ್ಥಿಕ ಶಕ್ತಿಯನ್ನು ತುಂಬಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದ್ದಾರೆ. ಸುಳ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ (ಸಿಎಬ್ಯಾಂಕ್) ಅಜ್ಜಾವರ ಶಾಖೆಯ ನವೀಕೃತ ಬ್ಯಾಂಕಿಂಗ್ ಕಚೇರಿ ಉದ್ಘಾಟನೆ ಮತ್ತು ನೂತನ ಸಭಾಭವನ ಲೋಕಾರ್ಪಣಾ ಸಮಾರಂಭವನ್ನು
ಉದ್ಘಾಟಿಸಿ ಅವರು ಮಾತನಾಡಿದರು. ಈ ಸಹಕಾರ ಸಂಘವನ್ನು ಮುನ್ನಡೆಸಿದವರು ತಮಗೆ ಸಿಕ್ಕಿದ ಅವಕಾಶವನ್ನು ದೇವರ ಸೇವೆ ಎಂದು ತಿಳಿದು ಕೆಲಸ ಮಾಡಿದ ಕಾರಣ ಸಿಎ ಬ್ಯಾಂಕ್ ಸುಳ್ಯದ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಗ್ರಾಮದ ಜನರ ಮತ್ತು ಹಿರಿಯರ ಸಹಕಾರ ಮತ್ತು ಆಡಳಿತ ಮಂಡಳಿಯ ಇಚ್ಛಾಶಕ್ತಿಯ ಕಾರಣದಿಂದ ಅಜ್ಜಾವರ ಶಾಖೆ ಉತ್ತಮವಾಗಿ ಬೆಳೆದಿದೆ ಎಂದರು. ಸಹಕಾರ ಸಚಿವಾಲಯವನ್ನು ಸ್ಥಾಪಿಸುವುದರ ಮೂಲಕ ಕೇಂದ್ರ ಸರಕಾರ ಸಹಕಾರ ಕ್ಷೇತ್ರಕ್ಕೆ ಶಕ್ತಿ ತುಂಬಿದೆ. ಕೃಷಿಕರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುವ ಮೂಲಕ ಉತ್ತಮ ಬದುಕನ್ನು ನೀಡಿದೆ. ದೇಶದ ಆರ್ಥಿಕತೆಯನ್ನು ಸದೃಢವಾಗಿ ಬೆಳೆಸಿದೆ ಎಂದು ಅವರು ಹೇಳಿದರು. ಮಾರಾಟ ಮಳಿಗೆಯನ್ನು ಕಿಶೋರ್ ಕುಮಾರ್ ಉದ್ಘಾಟಿಸಿದರು.

ನವೀಕೃತ ಬ್ಯಾಂಕಿಂಗ್ ಕಚೇರಿಯನ್ನು ಉದ್ಘಾಟಿಸಿದ
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ
ಎಸ್.ಎನ್.ಮನ್ಮಥ ಮಾತನಾಡಿ ಸಹಕಾರ ಸಂಘಗಳು ಹಿರಿಯರ ಕಲ್ಪನೆಯಂತೆ ಬೆಳೆದು ವಾಣೀಜ್ಯ ಬ್ಯಾಂಕ್ಗಳಿಗೆ ಸರಿ ಸಮಾನಾಗಿ ಅಭಿವೃದ್ಧಿ ಹೊಂದಿ ಎಲ್ಲರ ಬ್ಯಾಂಕ್ ಆಗಿ ಬೆಳೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರ ದೇಶಕ್ಕೆ ಮಾದರಿಯಾಗಿ ಬೆಳೆದಿದೆ ಎಂದರು.
ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ
ವಿಕ್ರಮ್ ಎ.ವಿ. ಅಡ್ಪಂಗಾಯ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಗ್ರಾಹಕರಿಗೆ ಎಲ್ಲಾ ರೀತಿಯ ಆಧುನಿಕ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ. ಹಿರಿಯರ ಕಲ್ಪನೆಯಂತೆ ಸಹಕಾರ ಸಂಘವನ್ನು ಬಲಿಷ್ಠವಾಗಿ ಬೆಳೆಸುತ್ತೇವೆ ಎಂದರು.

ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಹೆಚ್.ಎನ್ ಸಭಾಭವನ ಲೋಕಾರ್ಪಣೆ ಮಾಡಿದರು.
ಸಹಕಾರ ಸಂಘಗಳ ಪುತ್ತೂರು ಉಪವಿಭಾಗದ ಸಹಾಯಕ ನಿಬಂಧಕರಾದ ರಘು ಎಸ್. ಎಂ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಅಜ್ಜಾವರ ಗ್ರಾಮದಿಂದ ಸಿಎ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.ಸಿಎ ಬ್ಯಾಂಕ್ನ

ಉಪಾಧ್ಯಕ್ಷ ಚಂದ್ರಶೇಖರ ನಡುಮನೆ ನಿರ್ದೇಶಕರಾದ ಎನ್.ಎ.ರಾಮಚಂದ್ರ, ಬಾಲಗೋಪಾಲ ಎಂ ಸೇರ್ಕಜೆ, ಪ್ರಬೋದ್ ಶೆಟ್ಟಿ ಮೇನಾಲ, ವೆಂಕಟ್ರಮಣ ಮುಳ್ಯ, ವಾಸುದೇವ ನಾಯಕ್.ಪಿ, ನವ್ಯ.ಎ.ಸಿ, ಶಿವರಾಮ ಕೆ, ಹರಿಣಾಕ್ಷಿ ಬಿ, ಕೇಶವ ಸಿ.ಎ, ಚಂದ್ರಶೇಖರ ಡಿ.ಕೆ, ಹೇಮಂತ್ ಕೆ.ಆರ್, ಮುಖ್ಯ ಕಾರ್ಯನಿರ್ವಣಾಧಿಕಾರಿ ಸುದರ್ಶನ ಎಸ್.ಪಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಪ್ರಬೋದ್ ಶೆಟ್ಟಿ ಮೇನಾಲ ಸ್ವಾಗತಿಸಿ, ಉಪಾಧ್ಯಕ್ಷ ಚಂದ್ರಶೇಖರ ನಡುಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು.ನಿರ್ದೇಶಕ ಕೇಶವ ಸಿ.ಎ. ವಂದಿಸಿದರು. ಬಾಲಕೃಷ್ಣ ಮೇನಾಲ ಕಾರ್ಯಕ್ರಮ ನಿರೂಪಿಸಿದರು.







