ಸುಳ್ಯ: ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರು ಹಾಗೂ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಗೌಡ ಮತ್ತು ಮನೆಯವರು ಸೇವಾರೂಪವಾಗಿ ನೀಡಿದ ಬ್ರಹ್ಮರಥವನ್ನು ಸಮರ್ಪಣೆ ಮಾಡಲಾಯಿತು.ಡಿ.31ರಂದು ತಂತ್ರಿಗಳಾದ ಆರೋತ್ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಚೆನ್ನಕೇಶವ ದೇವಸ್ಥಾನಕ್ಕೆ ಸಮರ್ಪಣೆ ಮಾಡಲಾಯಿತು.ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ರಥ ದೇವರಿಗೆ ಅರ್ಪಿಸಲಾಯಿತು. ಚೆನ್ನಕೇಶವ ದೃವಸ್ಥಾನದ
ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಅವರ ಸೂಚನೆಯ ಮೇರೆಗೆ ಕವಳಿಗೆ ಮನೆತನದ ವೀರಕೇಸರಿ ಅವರ ಮೂಲಕ ದೇವಸ್ಥಾನಕ್ಕೆ ಡಾ.ಕೆ.ವಿ.ಚಿದಾನಂದ ಹಾಗೂ ಮನೆಯವರು ರಥ ಸಮರ್ಪಣೆ ಮಾಡಿದರು. ಬ್ರಹ್ಮರಥ ಸಮರ್ಪಣೆ ಸಂಬಂಧಿಸಿ ಜ.1 ಮತ್ತು 2ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಜ.1ರಂದು ರಾತ್ರಿ

ಗಂಟೆ 7.00ರಿಂದ ಬ್ರಹ್ಮ ರಥದ ಆಲಯಕ್ಕೆ ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ವಾಸ್ತುಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಜ.2 ರಂದು ಬೆಳಿಗ್ಗೆ 7ರಿಂದ ಗಣಹೋಮ, ಕಲಶಾಭಿಷೇಕಗಳು ಹಾಗೂ ಪೂರ್ವಾಹ್ನ 9.15ರಿಂದ 9.35ರ ನಡುವಿನ ಮಕರ ಲಗ್ನದ ಸುಮೂರ್ಹತದಲ್ಲಿ ಬ್ರಹ್ಮರಥದ ಭೂ ಸ್ಪರ್ಶ, ಬ್ರಹ್ಮರಥ ಪೂಜೆ ನಡೆಯಲಿದೆ. ಪೂ.10ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಕೋಟೇಶ್ವರದಿಂದ ಡಿ.25ರಂದು ಚೆನ್ನಕೇಶವನ ಸನ್ನಿಧಿಗೆ ನೂತನ ಬ್ಬ್ರಹ್ಮರಥ ಆಗಮಿಸಿತು.

ಬ್ರಹ್ಮರಥ ಸಮರ್ಪಣೆ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೃಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಉಪಾಧ್ಯಕ್ಷೆ ಶೊಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಕಾರ್ಯದರ್ಶಿಗಳಾದ ಡಾ.ಐಶ್ವರ್ಯ, ಕೆ.ವಿ.ಹೇಮನಾಥ, ಖಜಾಂಜಿ ಗೌತಂ ಗೌಡ, ಎಒಎಲ್ಇ ಕೌನ್ಸಿಲ್ ಸದಸ್ಯರಾದ ಜಗದೀಶ ಅಡ್ತಲೆ, ಮೀನಾಕ್ಷಿ ಹೇಮನಾಥ ಕೆ.ವಿ, ಬ್ರಹ್ಮರಥ ಸಮರ್ಪಣಾ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್, ಪ್ರಧಾನ ಕಾರ್ಯದರ್ಶಿ ಡಾ.ಲೀಲಾಧರ ಡಿ.ವಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎಂ.ಮೀನಾಕ್ಷಿ ಗೌಡ, ಲಿಂಗಪ್ಪ ಗೌಡ ಕೇರ್ಪಳ, ಪ್ರಮುಖರಾದ

ಪ್ರೊ.ದಾಮೋದರ ಗೌಡ, ರಾಮಚಂದ್ರ ಪಿ.ಆಗ್ರೋ, ಚಂದ್ರಶೇಖರ ಪೇರಾಲು, ಪುರುಷೋತ್ತಮ ಕೆ.ಜಿ, ಹೇಮಂತಕುಮಾರ್ ಗೌಡರಮನೆ, ತಿಮ್ಮಪ್ಪ ಗೌಡ ಕುಂಡಡ್ಕ, ಆಶಾ ತಿಮ್ಮಪ್ಪ, ಗೋಪಾಲಕೃಷ್ಣ ‘ಸ್ಟುಡಿಯೋ ಗೋಪಾಲ್’ ಡಾ.ಹರ್ಷಿತಾ ಪುರುಷೋತ್ತಮ, ದೇವಿಪ್ರಸಾದ್ ಅತ್ಯಾಡಿ, ಅವಿನಾಶ್ ಕುರುಂಜಿ, ಸಂದೇಶ್ ಕುರುಂಜಿ, ಹರೀಶ್ ಉಬರಡ್ಕ, ರಜತ್ ಅಡ್ಕಾರ್, ಸತೀಶ್ ಕೆ.ಜಿ, ಗಂಗಾಧರ ನವರತ್ನ ಮತ್ತಿತರರು ಉಪಸ್ಥಿತರಿದ್ದರು