ಸುಳ್ಯ:ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ಸಂಯೋಜಿತ ಸುಳ್ಯ ದ ಕ ಇದರ ವತಿಯಿಂದ ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಹಳೆಗೇಟಿನ ಸಂಘದ ಕಚೇರಿ ತಿಲಕ ಭವನ ಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪ್ರಕಾಶ್ ಎಂ ಎಸ್ ವಹಿಸಿದ್ದರು. ವಕೀಲರಾದ ಭಾಸ್ಕರ್ ರಾವ್ ಬೌದ್ದಿಕ್ ನೀಡಿದರು. ಭಾರತೀಯ
ಮಜ್ದೂರ್ ಸೇವಾ ಟ್ರಸ್ಟ್ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಪಿ ಪೈಚಾರ್ ಮತ್ತು ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ನ ಸದಸ್ಯ ರಾಧಾಕೃಷ್ಣ ಬೈತಡ್ಕ ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಜನಾರ್ದನ ಶ್ರೀರಾಮ್ ಪೇಟೆ ರೋಹಿತ್ ಗಾಂಧಿನಗರ ಶಿವಾನಂದ ಗೋಪಿಕಾ ಮಾಜಿ ಕಾರ್ಯದರ್ಶಿ ಚಂದ್ರ ಶೇಖರ ಮರ್ಕಂಜ ಲೋಕೇಶ್ ಬಸ್ ನಿಲ್ದಾಣ ಪ್ರದೀಪ್ ರಥಬೀದಿ ಜಗದೀಶ್ ಎನ್.ಆರ್.ಪೈಚಾರ್, ಚಾಮಯ್ಯ ಮಾರ್ಕೆಟ್ ರಸ್ತೆ ಪ್ರಸನ್ನ ರಥಬೀದಿ ರಾಧಾ ಕೃಷ್ಣ ಕುರುಂಜಿಭಾಗ್ ಶಂಕರ ಕುರುಂಜಿಭಾಗ್ ವೇಣು ಗೋಪಾಲ ನಾಯರ್, ಚಿದಾನಂದ ಮಾಣಿಕ್ಯ ಚಿದಾನಂದ ಕುರುಂಜಿಭಾಗ್ ಮತ್ತಿತೀತರರು ಉಪಸ್ತಿತರಿದ್ದರು ಸುರೇಂದ್ರ ಕಾಮತ್ ಸ್ವಾಗತಿಸಿ ರವಿ ಎಸ್ ವಂದಿಸಿದರು ನಾರಾಯಣ ಎಸ್ ಎಂ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಸುಳ್ಯ ತಾಲೂಕು ಸಂಘದ ಹರಿಹರ ಘಟಕ, ಸುಬ್ರಹ್ಮಣ್ಯ ಘಟಕ, ಪಂಜ ಘಟಕ, ಜಾಲ್ಸೂರು ಘಟಕ, ಕುಕ್ಕುಜಡ್ಕ ಘಟಕ, ಗುತ್ತಿಗಾರು ಘಟಕ, ಎಡಮಂಗಲ ಘಟಕ, ಕಲ್ಲುಗುಂಡಿ ಘಟಕಗಳಲ್ಲಿಯೂ ಆಚರಿಸಲಾಯಿತು. ಸಂಘದ ಪದಾಧಿಕಾರಿಗಳು ಭಾರತ ಮಾತೆಯ ಮತ್ತು ಭಗವಾನ್ ವಿಶ್ವಕರ್ಮ ಹಾಗೂ ಸಂಸ್ಥಾಪಕಾರದ ದತ್ತೋಪಂತ್ ಥೇಂಗಡಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.








