ಅಜ್ಜಾವರ:ಅಜ್ಜಾವರ ಮೇನಾಲದ ಮುಹಿಯುದ್ದೀನ್ ಜುಮಾ ಮಸೀದಿಯ ನೂರುಲ್ ಇಸ್ಲಾಂ ಮದರಸದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಸೆ.3ರಂದು ನಡೆಯಿತು.ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಅಧ್ಯಕ್ಷರು ಹಾಗು ಎಂಜೆಎಂ ಅಜ್ಜಾವರ ಮೇನಾಲ ಇದರ ಖಾಝಿಯವರಾದ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೂತನ ಮದ್ರಸ ಕಟ್ಟಡವನ್ನು ಉದ್ಘಾಟಿಸಿದರು. ಸುಂದರವಾದ ಮದ್ರಸ ಕಟ್ಟಡವನ್ನು
ನಿರ್ಮಿಸಿರುವುದು ಎಲ್ಲರಿಗೂ ಸಂತಸ ನೀಡುವ ವಿಷಯ ಎಂದು ಶ್ಲಾಘಿಸಿದ ಅವರು ಕಾಲ ಕಾಲಕ್ಕೆ ಆಗುತ್ತಿರುವ ಬದಲಾವಣೆಗೆ ಒಗ್ಗಿಕೊಂಡು ಆಧುನಿಕ ತಂತ್ರಜ್ಞಾನ ಮತ್ತು ಭೌತಿಕ ವ್ಯವಸ್ಥೆಗಳನ್ನು ಬಳಸಿಕೊಂಡು ಮೌಲ್ಯಯುತ ಶಿಕ್ಷಣವನ್ನು ನೀಡಬೇಕು ಎಂದು ಕರೆ ನೀಡಿದರು.
ನೂರುಲ್ ಇಸ್ಲಾಂ ಮದರಸ ಕಟ್ಟಡ ಸಮಿತಿ ಅಧ್ಯಕ್ಷ ಮುಸ್ತಫ ಹಾಜಿ ಡೆಲ್ಮ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಸಯ್ಯದ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ,ಸಯ್ಯದ್ ಮುಕ್ತಾರ್ ತಂಙಳ್ ಕುಂಬೋಳ್, ಸಯ್ಯದ್ ಹುಸೈನ್ ತಂಙಳ್ ಆದೂರು ಮುಖ್ಯ ಅತಿಥಿಗಳಾಗಿದ್ದರು. ಅಜ್ಜಾವರ ಎಂಜೆಎಂ ಅಧ್ಯಕ್ಷ ಎ.ಪಿ.ಅಬ್ದುಲ್ಲಕುಂಞಿ, ಹಾಜಿ ಪಳ್ಳಿಕೆರೆ, ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಖತೀಬರಾದ ಕೆ.ಎಂ. ಹಸೈನಾರ್ ಫೈಝಿ,ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಮುಹಮ್ಮದ್ ನವವಿ ಮುಂಡೋಲೆ, ಇರುವಂಬಳ್ಳ ಜುಮಾ ಮಸೀದಿ ಖತೀಬರಾದ ಅಶ್ರಫ್ ನಹೀಮಿ, ಮಂಡೆಕೋಲು ಮಸೀದಿಯ ಖತೀಬರಾದ ಶಮೀಮ್ ಅರ್ಷದಿ, ಗುರುವಮೊಟ್ಟೆ ಜುಮಾ ಮಸೀದಿಯ ಖತೀಬರಾದ
ಮುಹಮ್ಮದ್ ಶರೀಫ್ ಅಹ್ಸನಿ, ಕರ್ನಾಟಕ ಮುಸ್ಲಿಂ ಸಮಾಜದ ಉಪಾಧ್ಯಕ್ಷ
ಇಕ್ಬಾಲ್ ಎಲಿಮಲೆ, ಸುಳ್ಯ ತಾಲೂಕು ಸಮಸ್ತ ಅಧ್ಯಕ್ಷ ಅಬ್ದುಲ್ ಖಾದರ್ ಬಾಯಂಬಾಡಿ, ಪ್ರಮುಖರಾದ ಅಬೂಬಕ್ಕರ್ ಮಂಗಳ, ತಾಜ್ ಮಹಮ್ಮದ್ ಸಂಪಾಜೆ, ಹಮೀದ್ ಹಾಜಿ ಸುಳ್ಯ, ಎ.ಬಿ. ಅಶ್ರಫ್ ಸಹದಿ, ಹಸೈನಾರ್ ಹಾಜಿ, ಇಬ್ರಾಹಿಂ ಹಾಜಿ ಕತ್ತರ್, ಮಹಮ್ಮದ್ ಕುಂಞಿ ಬಳಕ್ಕಂ, ಜಾಫರ್ ಸಾದಿಕ್, ಕಲಂದರ್ ಎಲಿಮಲೆ, ಹಸೈನಾರ್ ಹಾಜಿ ಗೋರಡ್ಕ, ಮಹಮ್ಮದ್ ಕುಂಞಿ ಅಡ್ಕ,ನೂರುಲ್ ಇಸ್ಲಾಂ ಮದರಸ ಕಟ್ಟಡ
ಸಮಿತಿಯ ಉಪಾಧ್ಯಕ್ಷರಾದ ಇಬ್ರಾಹಿಂ ಹಾಜಿ ಕೊಳಂಬೆ, ಶರೀಫ್ ರಿಲಾಕ್ಸ್, ಪ್ರಧಾನ ಕಾರ್ಯದರ್ಶಿ ಎ.ಎಂ.ಅಬೂಬಕ್ಕರ್ ಹಾಜಿ, ಕೋಶಾಧಿಕಾರಿ ಅಬ್ಬಾಸ್ ಹಾಜಿ ಡೆಲ್ಮಾ, ಜೊತೆ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಯಂಬು, ಅಜ್ಜಾವರ ಎಂಜೆಎಂ ಉಪಾಧ್ಯಕ್ಷ ಅಂದ ಹಾಜಿ ಪ್ರಗತಿ, ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ, ಕೋಶಾಧಿಕಾರಿ ಹಸೈನಾರ್ ಜಿ.ಎಂ, ಅಬ್ದುಲ್ ಖಾದರ್ ಬಂಟ್ರಬೈಲು, ಉಮರ್ ಹಾಜಿ ಜಿ.ಎಂ, ಶಾಫಿ ಡಿ.ಎಂ. ಮತ್ತಿತರರು ಉಪಸ್ಥಿತರಿದ್ದರು.
ಶಾಫಿ ದಾರಿಮಿ ಸ್ವಾಗತಿಸಿದರು.ಅಬ್ದುಲ್ ರಝಾಕ್ ಮುಸ್ಲಿಯಾರ್, ಮಹಮ್ಮದ್ ರಫೀಕ್ ಮುಸ್ಲಿಯಾರ್, ಮೊಯ್ದೀನ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ನೂರುಲ್ ಇಸ್ಲಾಂ ಮದರಸಕ್ಕೆ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.










