ಬೆಂಗಳೂರು:ಸಾರಿಗೆ ಸಚಿವ ಬೈರತಿ ಸುರೇಶ್ ಅವರನ್ನು ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ ಅವರು ಸುಳ್ಯ ಬಸ್ ಘಟಕಕ್ಕೆ ನೂತನ ಬಸ್ ಒದಗಿಸುವಂತೆ ಮನವಿ ಮಾಡಿದರು.ಸುಳ್ಯ ಬಸ್ ಘಟಕದಲ್ಲಿ ಬಸ್ಗಳು ಹಾಗೂ ಸಿಬ್ಬಂದಿಗಳ ಕೊರತೆ ಇರುವುದರಿಂದ ಗ್ರಾಮೀಣ ಪ್ರದೇಶದ
ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.ಆದ್ದರಿಂದ ಸುಳ್ಯ ಬಸ್ ಘಟಕಕ್ಕೆ 10 ಹೊಸ ಬಸ್ಗಳನ್ನು ಮತ್ತು ಚಾಲಕ ಮತ್ತು ನಿರ್ವಾಹಕರನ್ನು ನೇಮಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಮುಂದಿನ 6 ತಿಂಗಳಿನಲ್ಲಿ ಸರಕಾರಕ್ಕೆ ಹೊಸಬಸ್ಸುಗಳು ಹಸ್ತಾಂತರವಾಗಲಿದ್ದು ನಂತರ ಬಸ್ಸುಗಳನ್ನು ಮತ್ತು ಸಿಬ್ಬಂದಿಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










