ಸುಳ್ಯ:ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಭಾರೀ ಚರ್ಚೆಗೆ ಗ್ರಾಸವಾಗಿರುವ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಭೆಯಲ್ಲಿಯೂ ವಿಸ್ತೃತ ಚರ್ಚೆ ನಡೆಯಿತು.ಮೃತರ ಖಾತೆಗೆ ಜಮೆಯಾದ ಗೃಹಲಕ್ಷ್ಮಿ ಹಣ ವಾಪಾಸ್ಸಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಅಧಿಕಾರಿಗಳಿಗೆ
ಸೂಚನೆ ನೀಡಿದ್ದಾರೆ.ಮೃತಪಟ್ಟವರ ಹೆಸರಿನ ಖಾತೆಯಲ್ಲಿ ಜಮೆಯಾದ ಹಣವನ್ನು ಎಟಿಎಂ ಮೂಲಕ ಪಡೆದು ಸರಕಾರಕ್ಕೆ ವಂಚಿಸಿರುವುದು ವಿಷಾಧನೀಯ, ಆದುದರಿಂದ ಮರು ಪಾವತಿಸದೇ ಇದ್ದಲ್ಲಿ ಸರಕಾರಿ ಸೌಲಭ್ಯ ಪಡೆಯಲು ಸಮಸ್ಯೆಯಾಗಬಹುದು ಎಂದು ಅವರು ಹೇಳಿದರು.
ಮೃತ ಫಲಾನುಭವಿಗಳ ಖಾತೆಯಿಂದ ಎಟಿಎಂ ಹಣ ಮೂಲಕ ಡ್ರಾ ಮಡಲಾಗಿದೆ ಇದಕ್ಕೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ ಎಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಕುರಿತು ಬ್ಯಾಂಕ್ ಹಾಗೂ ಫಲಾನುಭವಿಗಳ ಮನೆಯವರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಸರಕಾರಕ್ಕೆ ಹಣ ಮರುಪಾತಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಇದೀಗ 31ನೇ ಕಂತಿನ ಹಣ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ, ಕೆಲವರಿಗೆ ಬರುತಿದೆ, ಉಳಿದವರ ಖಾತೆಗಳಿಗೆ ಜಮಾವಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಗೃಹಜ್ಯೋತಿ ,ಅನ್ನಭಾಗ್ಯ ಯೋಜನೆಯ ಕುರಿತು ಚರ್ಚೆ ನಡೆಯಿತು. ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನೆ ಪ್ರಗತಿಯ ಬಗ್ಗೆ ಮೆಸ್ಕಾಂ ಇಂಜಿನಿಯರ್ಗಳಿಂದ ಮಾಹಿತಿ ಪಡೆಯಲಾಯಿತು.
ಯುವ ನಿಧಿ ಸಂಬಂಧಿಸಿದಂತೆ ಯುವ ನಿಧಿ ಪಡೆದ ಫಲಾನುಭವಿಗಳ ಪೈಕಿ ಎಷ್ಟು ಮಂದಿ ಉದ್ಯೋಗ ಪಡೆದಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು ಹಾಗೂ ಅವರಿಗೆ ಉದ್ಯೋಗಕ್ಕೆ ಪ್ರೇರಣೆಯನ್ನು ನೀಡಬೇಕು ಎಂದು ಸೂಚಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿ ಸದಸ್ಯ ಕಾರ್ಯದರ್ಶಿ ರಾಜಣ್ಣ ಉಪಸ್ಥಿತರಿದ್ದರು.








