ಬೆಳ್ಳಾರೆ:ಕೇಂದ್ರೀಯ ಪಠ್ಯಕ್ರಮದ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ 2026ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಗೆ ಹಾಜರಾದ 60 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು
ಉತ್ತೀರ್ಣರಾಗಿ ಶೇ. 100 ಫಲಿತಾಂಶ ದಾಖಲಾಗಿದೆ.
21 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 30 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶ್ರೇಷ್ಠ ಕೆ ಶೆಟ್ಟಿ ಪ್ರಥಮ ಸ್ಥಾನ, ವಿಭವ್ ಆರ್ ಕಾರ್ತಿಕ್ ದ್ವಿತೀಯ ಸ್ಥಾನ, ಅಜ್ಞ ಬಿ ರೈ ತೃತೀಯ ಸ್ಥಾನ ಪಡೆದಿದ್ದಾರೆ. ಶೇ.96.2 ಅಂಕಗಳದಿಗೆ ಶ್ರೇಷ್ಠ ಶೆಟ್ಟಿ ಕೆ. ಶೆಟ್ಟಿ ಶಾಲೆಗೆ ಪ್ರಥಮ, ಶೇ.95.6 ಅಂಕಗಳೊಂದಿಗೆ ವಿಭವ್ ಆರ್.ಕಾರ್ತಿಕ್ ದ್ವಿತೀಯ, ಶೇ. 92.6
ಅಂಕಗಳೊಂದಿಗೆ ಆಜ್ಞ ಬಿ ರೈ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗು ಬೋಧಕ ವೃಂದದವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ
















