ಸುಳ್ಯ: ಸುಳ್ಯದಲ್ಲಿ ಧ್ವನಿ ಬೆಳಕು ಮತ್ತುಶಾಮಿಯಾನ ಮಾಲಕರ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾದ ಬ್ಯಾಂಕ್ ಆಫ್ ಬರೋಡ ತಂಡಕ್ಕೆ ಹರ್ಲಡ್ಕ ವಿಲ್ಲಾದಲ್ಲಿ ಹರ್ಲ ಫೌಂಡೆಶನ್ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ
ಹರ್ಲ ಫೌಂಡೇಶನ್ ಅಧ್ಯಕ್ಷ ಲತೀಫ್ ಹರ್ಲಡ್ಕ, ಸುಳ್ಯ ಪೋಲಿಸ್ ಉಪನಿರೀಕ್ಷಕರಾದ ಈರಯ್ಯ ದೂಂತೂರು,ಮಾಜಿ ಕಬಡ್ಡಿ ಆಟಗಾರ ಹರ್ಲ ಫೌಂಡೇಷನ್ ನಿರ್ದೇಶಕ ಹಮೀದ್ ಹೊಸ್ಮಠ, ಪತ್ರಕರ್ತ ಶರೀಫ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು. ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಜೇಯರಾಗಿ ಚಾಂಪಿಯನ್ ಆಗಿ ಹೊರ ಹೊಮ್ಮಿದ ಬಿಒಬಿ ತಂಡದ ಸದಸ್ಯರನ್ನು ಹರ್ಲಡ್ಕ ವಿಲ್ಲಾಕ್ಕೆ ಸ್ವಾಗತಿಸಿದ ಲತೀಫ್ ಹರ್ಲಡ್ಕ ಖ್ಯಾತ ಕಬಡ್ಡಿ ತಾರೆ ಸುಖೇಶ್ ಹೆಗ್ಡೆ ಹಾಗೂ ಇತರ ಆಟಗಾರರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಎಸ್ಐ ಈರಯ್ಯ ದೂಂತೂರು ಅವರನ್ನು ಗೌರವಿಸಲಾಯಿತು.