ಸುಳ್ಯ: ಸುಳ್ಯ ತಾಲೂಕು ಗೌಡ ಮಹಿಳಾ ಘಟಕದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ಸುಳ್ಯ ತಾಲೂಕು ಗೌಡ ಸಮಿತಿ ವ್ಯಾಪ್ತಿಯ ಬಲೀಂದ್ರ ಅಲಂಕಾರ ಸ್ಪರ್ಧೆಯು ನಡೆಯಲಿದೆ ಎಂದು ಗೌಡ ಮಹಿಳಾ ಘಟಕದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಮಾಜದ ಆಚಾರ-ವಿಚಾರ, ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗೌಡ ಸಮಾಜದವರಿಗಾಗಿ ತಾಲೂಕು ಮಟ್ಟದ
ಬಲೀಂದ್ರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯು ತಾಲೂಕಿನ ಗೌಡ ಸಮಾಜದ ಬಾಂಧವರಿಗೆ ಮಾತ್ರ ಸೀಮಿತವಾಗಿರುತ್ತದೆ. ಮೂಲ ಸಂಪ್ರದಾಯವನ್ನು ಉಳಿಸಿಕೊಂಡು ನೈಸರ್ಗಿಕವಾದ ಅಲಂಕಾರಗಳಿಗೆ ಮಾತ್ರ ಪ್ರಾಧಾನ್ಯತೆ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಅಕ್ಟೋಬರ್ 22 ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು. ಸುಳ್ಯ ತಾಲೂಕು ಸೇರಿದಂತೆ, ಸುಬ್ರಹ್ಮಣ್ಯ, ಬಳ್ಪ, ಯೇನೆಕಲ್ಲು, ಪೆರಾಜೆ, ಕೊಡಗು ಸಂಪಾಜೆ, ಚೆಂಬು, ಬಂದ್ಯಡ್ಕ, ಕಲ್ಲಪಳ್ಳಿ, ಬೆಳ್ಳಿಪ್ಪಾಡಿ ಹೀಗೆ ಗೌಡ ಸಮಾಜ ವ್ಯಾಪ್ತಿಯವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧೆಯ ವಿಜೇತರಿಗೆ ಪ್ರಥಮ 5000ರೂ.ವಿನ ಬಹುಮಾನ ಮತ್ತು ಫಲಕ, ದ್ವಿತೀಯ 3000ರೂ.ವಿನ ಬಹುಮಾನ ಮತ್ತು ಫಲಕ, ತೃತೀಯ 2000ರೂ.ವಿನ ಬಹುಮಾನ ಮತ್ತು ಫಲಕ ಹಾಗೂ ಇತರ 5 ಆಕರ್ಷಕ ಬಹುಮಾನವನ್ನು ನೀಡಲಾಗುವುದು ಎಂದು ಗೌಡ ಮಹಿಳಾ ಘಟಕದ
ಅಧ್ಯಕ್ಷೆ ವಿನುತ ಪಾತಿಕಲ್ಲು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮೀನಾಕ್ಷಿ ಸುಂದರ ಗೌಡ ,ತಾರ ಮಾಧವ ಗೌಡ ಬೆಳ್ಳಾರೆ , ಹೇಮಲತ ದೇಂಗೋಡಿ ,ಪುಫ್ಪರಾಧಾಕೃಷ್ಣ , ಸವಿತಾ ಸಂದೇಶ್ , ಜಯಶ್ರೀ ರಾಮಚಂದ್ರ ತಾಲೂಕು ತರುಣ ಘಟಕದ ಅಧ್ಯಕ್ಷರಾದ ಪ್ರೀತಂ ಉಪಸ್ಥಿತರಿದ್ದರು.